ಮನೆ ರಾಜಕೀಯ ಅಶ್ವಥ್ ನಾರಾಯಣ್ ಭಾಗಿಯಾಗಿದ್ದರೆ ಸಾಕ್ಷಿ ಕೊಡಿ: ಸಚಿವ ಗೋಪಾಲಯ್ಯ

ಅಶ್ವಥ್ ನಾರಾಯಣ್ ಭಾಗಿಯಾಗಿದ್ದರೆ ಸಾಕ್ಷಿ ಕೊಡಿ: ಸಚಿವ ಗೋಪಾಲಯ್ಯ

0

ಬೆಂಗಳೂರು(Bengaluru): ಪಿಎಸ್ ಐ ನೇಮಕಾತಿ ಅವ್ಯವಹಾರದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ ಮತ್ತು ಅವರ ಸಂಭಂದಿ  ಭಾಗಿಯಾಗಿರುವ ಕುರಿತು ಸಾಕ್ಷಿಗಳನ್ನು ಒದಗಿಸಲಿ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿರೋಧ ಪಕ್ಷಗಳ ನಾಯಕರನ್ನು ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದೇ ಕೆಲವರು ಮಾಡಿರುವ ಪಿತೂರಿ‌ ಇದು.ಪುರಾವೆಗಳು ಇದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ ಎಂದರು.

ಈ‌ ಹಿಂದಿನ ಸರ್ಕಾರದಲ್ಲಿ ಇದೇ ರೀತಿ ನಡೆದಿರುವ ನೇಮಕಾತಿ ಅಕ್ರಮಗಳ ಬಗ್ಗೆಯೂ ತನಿಖೆಯಾಗಬೇಕು. ಈಗಾಗಲೇ ಬಂಧಿತನಾಗಿರುವ ತುಮಕೂರು ಯುವಕ ಮತ್ತು ಆತನ ಸಹೋದರ ನಾವು ಅಶ್ವಥ್ ನಾರಾಯಣ್ ಅವರ‌ನ್ನು ನೋಡಿಯೇ ಇಲ್ಲ ಎನ್ನುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಶ್ವಥ್ ನಾರಾಯಣ ಅವರು ಭಾಗಿಯಾಗಿರುವ ಕುರಿತು ಸಾಕ್ಷಿ ಇದ್ದರೆ ನೀಡಲಿ ಎಂದು ಒತ್ತಾಯಿಸಿದರು.

ಹಿಂದಿನ ಲೇಖನನಡುರಸ್ತೆಯಲ್ಲಿ ಶಿಕ್ಷಕನನ್ನು ಎಳೆದೊಯ್ದು ದರ್ಪ ತೋರಿದ ಪಿಎಸ್ಐಗೆ ಸಾರ್ವಜನಿಕರಿಂದ ತರಾಟೆ
ಮುಂದಿನ ಲೇಖನಕಾಂಗ್ರೆಸ್ ನಿಂದ ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ: ಸಚಿವ ಆರಗ ಜ್ಞಾನೇಂದ್ರ