ಮನೆ ಸಾಹಿತ್ಯ ಬದುಕಿರುವಾಗಲೇ ನೀಡಿರಿ

ಬದುಕಿರುವಾಗಲೇ ನೀಡಿರಿ

0
    ಒಂದು ಹಂದಿಯು ತನಗೆ ಮನ್ನಣೆಯಿಲ್ಲ ಎಂದು ಯಾವಾಗಲೂ ಹಲುಬುತ್ತಿತ್ತು.ತಮ್ಮ ಗೆಳತಿ ಹಸುವಿನ ಬಳಿಗೆ ಹೋಗಿ ಜನರು ತನ್ನ ಬಗ್ಗೆ ಎಂದೂ ಒಳ್ಳೆಯ ಮಾತನ್ನು ಆಡುವುದಿಲ್ಲ. ಆದರೆ ನಿನ್ನನ್ನು ಎಲ್ಲರೂ ಹೊಗಳುತ್ತಾರೆ ಎನ್ನುತ್ತಿತ್ತು. ಹಸುವು ಹಾಲು ಮತ್ತು ಬೆಣ್ಣೆಯನ್ನೂ ನೀಡಬಹುದು ಆದರೆ ಹಂದಿ ಇನ್ನು ಹೆಚ್ಚಾದುದನ್ನು ನೀಡುತ್ತದೆ. ಅದು ಮಾಂಸ ಕೊಬ್ಬು ನೀಡುವುದಲ್ಲದೆ ಕುಂಚಗಳಾಗಿ ಮಾಡಲು ಕೂದಲನ್ನು ಒದಗಿಸುವುದೆಂದು ಹೇಳಿತು.ಆದರೂ ನನ್ನ ಕುರಿತು ಏಕೆ ಅದರವಿಲ್ಲ ಎಂದು ಮತ್ತೆ ಕೇಳಿತು.ಆಗ ಹಸು ಒಮ್ಮೆ ಯೋಚಿಸಿ ಹೀಗೆಂದು ಉತ್ತರಿಸಿತು :

Join Our Whatsapp Group

★ ಪ್ರಶ್ನೆಗಳು

  1. ಹಸು ಏನು ಹೇಳಿತು?
  2. ಈ ಕಥೆಯ ನೀತಿ ಏನು? ★ ಉತ್ತರಗಳು
  3. “ಇದಕ್ಕೆ ಕಾರಣ ನಾನು ಬದುಕಿರುವಾಗಲೇ ನನ್ನ ಕೊಡುಗೆಯನ್ನು ನೀಡುತ್ತೇನೆ.ಆದರೆ ನೀನು ಸತ್ತ ನಂತರವೇ ನೀಡುವೆ ”ಎಂದು ಹಸು ಹೇಳಿತು.
  4. ಕೆಲವರು ತಾವು ಸಂಪಾದಿಸಿದ್ದ ಹಣವನ್ನು ಅನುಭವಿಸದೆ ಸಂಗ್ರಹ ಮಾಡುತ್ತಾರೆ ತಮ್ಮ ಭವಿಷ್ಯ ಹಾಗೂ ವೃದ್ಧಪಕ್ಕಾಗಿ ಹಣವನ್ನು ಉಳಿಸುತ್ತಾರೆ. ಅನಿರ್ ಅನಿಶ್ಚಿತವಾಗಿರುವುದರಿಂದ ಸಾವು ಹಠಾತ್ತನೆ ಸಂಭವಿಸಬಹುದು. ಹೀಗಿರುವಾಗಿ ಖರ್ಚು ಮಾಡದೆ ದುರಾಸೆಯಿಂದ ಸಂಗ್ರಹಿಸಿದ ಹಣವನ್ನು ಕೂಡಿಟ್ಟರೆ ವ್ಯಕ್ತಿಗೆ ಏನು ಉಪಯೋಗವಾಗದು. ಹಣವನ್ನು ಖರ್ಚು ಮಾಡಿ ಸಾಧ್ಯವಾದಷ್ಟು ಇತರರಿಗೆ ದಾನ ಮಾಡುವುದು ಉತ್ತಮ. ಬದುಕಿರುವಾಗ ಹಣವನ್ನು ನೀಡಿ ಸಂತೋಷವನ್ನು ಗಳಿಸಿ.