ಕೊಪ್ಪಳ : ಇತಿಹಾಸ ಪ್ರಸಿದ್ಧ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮಾ ದೇವಿ ದೇವಸ್ಥಾನದ ಹುಂಡಿ ಏಣಿಕೆಯನ್ನು ಇಂದು ಮಾಡಲಾಗಿದೆ. ಸತತ ಮೂರು ದಿನಗಳ ಕಾಲ ಮುಜರಾಯಿ ಇಲಾಖೆ ಸಿಬ್ಬಂದಿಗಳು ಹುಂಡಿ ಏಣಿಕೆ ಮಾಡಿದ್ದಾರೆ.
ದೇವಸ್ಥಾನದ ಹುಂಡಿಯಲ್ಲಿ ಅಪಾರ ಹಣ, ಚಿನ್ನಾಭರಣ ಸಂಗ್ರಹವಾಗಿದ್ದು, 43 ದಿನಗಳಲ್ಲಿ ಒಟ್ಟು 95.02 ಲಕ್ಷ ಹಣ ಸಂಗ್ರಹವಾಗಿದೆ. ಅಷ್ಟೇ ಅಲ್ಲದೇ 60 ಗ್ರಾಂ ಬಂಗಾರ, 7 ಕೆಜಿ ಬೆಳ್ಳಿ ಸಹ ಸಮಗ್ರಹವಾಗಿದೆ.
ಸೆ. 3 ರಂದು ಹುಂಡಿಯಲ್ಲಿದ್ದ ಹಣ ಎಣಿಕೆ ವೇಳೆ ಒಟ್ಟು 40 ದಿನದಲ್ಲಿ 1.17 ಕೋಟಿ ರೂಪಾಯಿ ಜೊತೆಗೆ 130 ಗ್ರಾಂ ಬಂಗಾರ, 10 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿತ್ತು. ಈಗ ಭಾರೀ ಪ್ರಮಾಣದಲ್ಲಿ ನಗದು ಮತ್ತು ಬೆಳ್ಳಿ ಬಂಗಾರ ಕಂಡುಬಂದಿದೆ.
ದೇವಸ್ಥಾನದಲ್ಲಿ ಬಿಗಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನೆರವೇರಿದ್ದು, ಹುಂಡಿ ಏಣಿಕೆ ಮಾಡಿದ ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ಸಮ್ಮಾನಿಸಿದರು.















