ಮನೆ ತಂತ್ರಜ್ಞಾನ ಕನ್ನಡದ 5 ಹೊಸ ಯೂನಿಕೋಡ್ ಫಾಂಟ್ ವಿನ್ಯಾಸಗೊಳಿಸಿದ ತಿ.ನರಸೀಪುರ ಯುವಕ

ಕನ್ನಡದ 5 ಹೊಸ ಯೂನಿಕೋಡ್ ಫಾಂಟ್ ವಿನ್ಯಾಸಗೊಳಿಸಿದ ತಿ.ನರಸೀಪುರ ಯುವಕ

0

ಮೈಸೂರು(Mysuru): ತಿ.ನರಸೀಪುರ ಪಟ್ಟಣದ ಯುವ ಡಿಸೈನರ್ ಆರ್.ಮಂಜುನಾಥ್ ಎಟಿಎಸ್ ಬೆಂಗಳೂರು ಹೆಸರಿನಲ್ಲಿ ಐದು ಹೊಸ ಕನ್ನಡದ ಯೂನಿಕೋಡ್ ಫಾಂಟ್‌ ವಿನ್ಯಾಸಗೊಳಿಸಿ, ಗಮನಸೆಳೆದಿದ್ದಾರೆ.

ಮೈಸೂರಿನ ಖಾಸಗಿ ಕಂಪನಿಯಲ್ಲಿ ಲೀಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ಆರ್.ಮಂಜುನಾಥ್, ತಮ್ಮ‌ ಅಕ್ಷರ ಟೈಪ್‌ ಸ್ಟುಡಿಯೊ ಮೂಲಕ ಜನವರಿಯಲ್ಲಿ ಬಂಡೀಪುರ ಎಂಬ ಹೆಸರಿನಲ್ಲಿ ಹೊಸ ಕನ್ನಡ ಫಾಂಟ್ ನೀಡಿದ್ದರು.

ಈಗ ಮತ್ತೊಮ್ಮೆ ಸಾರ್ವಜನಿಕರ ಬಳಕೆಗೆ ಸರಳ, ಬಿಟ್ ಮ್ಯಾಪ್ ಮಾದರಿಯಲ್ಲಿ ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಪೂರಕವಾದ ಬೆಂಗಳೂರು ಹೆಸರಿನಲ್ಲಿ ಡಾಟ್, ಸ್ಮೂತ್,‌ ಫಿಕ್ಸೆಲ್, ಸ್ಕ್ವೇರ್ ಹಾಗೂ ಎಲ್‌ಐಡಿ ಎಂಬ ಹೊಸ ಅಕ್ಷರಗಳನ್ನು ವಿನ್ಯಾಸಗೊಳಿಸಿ ತಮ್ಮ ವೆಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಫಾಂಟ್ ಡೌನ್‌ಲೋಡ್‌ಗೆ ಈ ಲಿಂಕ್ ಬಳಸಬಹುದಾಗಿದೆ. https://aksharatypestudio.in/fonts/bengaluru

ಹಿಂದಿನ ಲೇಖನಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ
ಮುಂದಿನ ಲೇಖನಬಿಜೆಪಿಯವರಿಗೆ ಪಾದಯಾತ್ರೆಗಳು ಹೊಸದಲ್ಲ: ಸಚಿವ ಬಿ.ಸಿ.ನಾಗೇಶ್