ಮನೆ ಸುದ್ದಿ ಜಾಲ ಫ್ಯಾನ್ಸ್‌ಗೆ ಗುಡ್ ನ್ಯೂಸ್ – ನಟ ಯಶ್ ಸಿಗ್ನಲ್ ಕೊಟ್ಟಾಯ್ತು

ಫ್ಯಾನ್ಸ್‌ಗೆ ಗುಡ್ ನ್ಯೂಸ್ – ನಟ ಯಶ್ ಸಿಗ್ನಲ್ ಕೊಟ್ಟಾಯ್ತು

0

ನಾಳೆ (ಜನವರಿ 8) ನಟ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 40ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಯಶ್ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಲು ರಾಕಿಂಗ್ ಅಭಿಮಾನಿಗಳಂತೂ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಬರ್ತ್‌ಡೇ ವಿಶೇಷವಾಗಿ ಟಾಕ್ಸಿಕ್ ಟೀಸರ್ ನಿರೀಕ್ಷೆಯಲ್ಲಿದ್ದ, ಫ್ಯಾನ್ಸ್‌ಗೆ ಟಾಕ್ಸಿಕ್ ಟೀಮ್ ಗುಡ್‌ನ್ಯೂಸ್ ಕೊಟ್ಟಿದೆ. ಅಲ್ಲಿಗೆ ದೊಡ್ಡದೇನೋ ಸಿಗ್ನಲ್ ಕೊಡುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ನಟ ಯಶ್ ಹುಟ್ಟುಹಬ್ಬದ ದಿನ ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟೀಸರ್ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ.

ಸ್ಯಾಂಡಲ್‌ವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಶ್ ಅಂದುಕೊಂಡಂತೆ ಔಟ್‌ಪುಟ್ ಬರೋವರೆಗೂ ಮಾತನಾಡೋದಿಲ್ಲ. ಅದರಂತೆ ಟಾಕ್ಸಿಕ್ ಟೀಸರ್‌ಗಾಗಿ ಕಾದಿದ್ದ ಫ್ಯಾನ್ಸ್‌ಗೆ ಬರ್ತ್‌ಡೇ ಮುನ್ನಾದಿನ ಕೊನೆಗೂ ಘೋಷಣೆ ಮಾಡಿದ್ದಾರೆ. ಯಶ್ ಬರ್ತ್‌ಡೇ ಖುಷಿ ಫ್ಯಾನ್ಸ್ ಪಾಲಿಗೆ ಇನ್ನಷ್ಟು ಅಧಿಕವಾಗಲಿದೆ.

ಕಳೆದ ಬಾರಿ ಯಶ್ ಹುಟ್ಟುಹಬ್ಬಕ್ಕೆ ಒಂದು ಆಕರ್ಷಕ ಗ್ಲಿಂಪ್ಸ್ ರಿಲೀಸ್ ಮಾಡಲಾಗಿತ್ತು. ಇದೀಗ ಟೀಸರ್ ರಿಲೀಸ್ ಅನೌನ್ಸ್ ಪೋಸ್ಟರ್ ಸಿಕ್ಕಾಪಟ್ಟೆ ಮಾಸ್ ಆಗಿದೆ. ಸುತ್ತಲೂ ಬೆಂಕಿ ಮಧ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನಿಂತಿರುವ ಭಂಗಿ ಥ್ರಿಲ್ಲಿಂಗ್ ಆಗಿದೆ. ಹೀಗಾಗಿ ಜನವರಿ 8ಕ್ಕೆ ರಿಲೀಸ್ ಆಗಲಿರುವ ಟಾಕ್ಸಿಕ್ ಟೀಸರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.