ಮನೆ ಮನರಂಜನೆ “ಬಾನದಾರಿಯಲಿ…’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

“ಬಾನದಾರಿಯಲಿ…’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

0

ನಟ ಗಣೇಶ್‌ ನಾಯಕರಾಗಿರುವ “ಬಾನದಾರಿಯಲಿ…’ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಬಾನದಾರಿಯಲಿ…’ ಸಿನಿಮಾದ ಟೀಸರ್‌, ಟ್ರೇಲರ್‌ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ಕೂಡ ಪ್ರೇಕ್ಷಕರ ಮನಮುಟ್ಟಲಿದೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.

Join Our Whatsapp Group

ಇನ್ನು, “ಬಾನದಾರಿಯಲಿ…’ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಾಯಕ ನಟ ಗಣೇಶ್‌ ಕ್ರಿಕೆಟ್‌ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಔಟ್‌ ಆ್ಯಂಡ್‌ ಔಟ್‌ ಲವ್‌ ಕಂ ಎಮೋಶನ್ಸ್‌ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಗಣೇಶ್‌ ಅವರಿಗೆ ರುಕ್ಮಿಣಿ ವಸಂತ್‌ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ಜೋಡಿಯಾಗಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡುವ ನಟ ಗಣೇಶ್‌, “ಸಾಮಾನ್ಯವಾಗಿ ನಾನು ಡಬ್ಬಿಂಗ್‌ ಸಮಯದಲ್ಲಿ ಸಿನಿಮಾದ ಬಗ್ಗೆ ಹೇಳಿ ಬಿಡುತ್ತೇನೆ. ಈ ಸಿನಿಮಾದ ಡಬ್ಬಿಂಗ್‌ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ಪ್ರೀತಾ ಜಯರಾಮ್‌ – ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಅರ್ಜುನ್‌ ಜನ್ಯ ಸಂಗೀತ ಚಿತ್ರದ ಮತ್ತೂಂದು ಹೈಲೆಟ್‌. ಆಡಿಯನ್ಸ್‌ ಮನಮುಟ್ಟುವ ತುಂಬ ವಿಷಯಗಳು ಸಿನಿಮಾದಲ್ಲಿದೆ. ಎಲ್ಲ ಕಲಾವಿದರ ಅಭಿನಯ ಚೆನ್ನಾಗಿದೆ. ಕೀನ್ಯಾ ಭಾಗದಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಖಂಡಿತವಾಗಿಯೂ ಆಡಿಯನ್ಸ್ಗೆ ಇಷ್ಟವಾಗಲಿದೆ’ ಎನ್ನುತ್ತಾರೆ.

 “ಬಾನದಾರಿಯಲಿ…’ ಸಿನಿಮಾಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ಈಗಾಗಲೇ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ ನಲ್ಲಿ “ಮಳೆಯಲಿ ಜೊತೆ ಯಲಿ’, “ದಿಲ್‌ ರಂಗೀಲಾ’ ಹಾಗೂ “99′ ಚಿತ್ರಗಳು ಬಂದಿವೆ. ಈಗ ನಾಲ್ಕನೇ ಬಾರಿಗೆ “ಬಾನದಾರಿಯಲಿ…’ ಸಿನಿಮಾ ದಲ್ಲಿ ಗಣೇಶ್‌ ಮತ್ತು ಪ್ರೀತಂ ಗುಬ್ಬಿ ಜೊತೆಯಾಗಿದ್ದಾರೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನರಾಷ್ಟ್ರೀಯ ಪೋಶನ್ ಅಭಿಯಾನ್ ಯೋಜನೆಯ ಅನುಷ್ಠಾನಕ್ಕಾಗಿ 02 ಬ್ಲಾಕ್ ಸಂಯೋಜಕರು, ಜಿಲ್ಲಾ ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.