ಗುಂಡ್ಲುಪೇಟೆ : ತಾಲೂಕಿನ ಮದ್ದೂರು ಚೆಕ್ ಪೋಸ್ಟ್ ಬಳಿ ನಡು ರಸ್ತೆಯಲ್ಲಿ ಗೂಡ್ಸ್ ವಾಹನವೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಕೇರಳದಿಂದ ಬರುತ್ತಿದ್ದ ಬೊಲೆರೊ ಪಿಕ್ ಅಪ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ವಾಹನದಿಂದ ಇಳಿದು ಬೆಂಕಿ ಅನಾಹುತದಿಂದ ಪಾರಾಗಿದ್ದಾನೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.