ಮನೆ ರಾಜ್ಯ ಮೈಸೂರಲ್ಲಿ ಯದುವೀರ್, ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು:  ಹೆಚ್. ವಿಶ್ವನಾಥ್

ಮೈಸೂರಲ್ಲಿ ಯದುವೀರ್, ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು:  ಹೆಚ್. ವಿಶ್ವನಾಥ್

0

ಮೈಸೂರು: ಇಂದು ಮೈಸೂರಿನ ಕೆ.ಆರ್‌.ನಗರದಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದರು.

Join Our Whatsapp Group

ಕೆ.ಆರ್.ನಗರವು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೆ ಸೇರುವ ಕಾರಣ ಜೆಡಿಎಸ್ ಅಭ್ಯರ್ಥಿ ಎಚ್ ಡಿಕೆ ವಿಶ್ವನಾಥ್ ಸಭೆ ಮಹತ್ವ ಪಡೆದಿದೆ. ಎಚ್ಡಿಕೆ ಅವರಿಗೆ ಜೆಡಿಎಸ್ ನಾಯಕರಾದ ಜಿ.ಟಿ.ದೇವೆಗೌಡ, ಸಾ.ರಾ.ಮಹೇಶ್, ಪುಟ್ಟರಾಜು‌ ಸಾಥ್ ನೀಡಿದರು.

ಬಳಿಕ ಮಾತನಾಡಿದ ಎಚ್. ವಿಶ್ವನಾಥ್, ರಾಜಕಾರಣ ನಿಂತ ನೀರಲ್ಲ. ಹರಿಯುವ ಗಂಗೆ. ಮಾತು, ಸಂಘರ್ಷ ರಾಜಕಾರಣದಲ್ಲಿ ಸಹಜ. ಇದನ್ನೆಲ್ಲಾ ಒಂದೊಂದು ಬಾರಿ ಸರಿಪಡಿಸಿಕೊಳ್ಳಬೇಕು. ದೇವೇಗೌಡರು ನನಗೆ ಸದಾ ಸ್ಮರಣೀಯರು. ನನ್ನ ಸಾರಾ ಮಹೇಶ್ ಭಿನ್ನಾಭಿಪ್ರಾಯ ಚಾಮುಂಡಿ ಬೆಟ್ಟದ ತನಕಹೋಗಿತ್ತು. ಇದೆಲ್ಲಾ ಸಹಜ. ಈಗ ಅದನ್ನೆಲ್ಲಾ ಮರೆತು ಜೊತೆಯಾಗಿದ್ದೇವೆ. ಈಗ ಎಲ್ಲಾ ಮರೆತು ಕುಮಾರಸ್ವಾಮಿ ನಮ್ಮ ಮನೆಗೆ ಬಂದಿದ್ದಾರೆ ಎಂದರು.

ಕಾಂಗ್ರೆಸ್ ನಲ್ಲಿ 17 ಜನರ ಮಕ್ಕಳು ಲೋಕಸಭೆಗೆ ಟಿಕೆಟ್ ಕೊಟ್ಟಿದ್ದಾರೆ. ಆಡಳಿತಾತ್ಮಕವಾಗಿ ಎಚ್ ಡಿ ಕುಮಾರಸ್ವಾಮಿಯನ್ನು ಟೀಕಿಸುತ್ತಿದ್ದಾರೆ‌. ಆದರೆ, ಎಚ್ ಡಿ ದೇವೇಗೌಡರ ಬಗ್ಗೆ ಮಾತಾಡಬೇಡಿ. ಆ ನೈತಿಕತೆ ಯಾರಿಗೂ ಇಲ್ಲ. ಯದುವಂಶದ ರಾಜರು ಅವಿರೋಧವಾಗಿ ಆಯ್ಕೆಯಾಗಲಿ ಎಂದರು.

ಸಿದ್ದರಾಮಯ್ಯ ಅವರೇ, ಮೈಸೂರಲ್ಲಿ ನಿಮ್ಮ ಮಗನನ್ನು ನಿಲ್ಲಿಸಬೇಕು ಅಂದುಕೊಂಡಿದ್ದಿರಿ. ನನ್ನ ಹೆಸರೂ ಇತ್ತು‌. ಸರ್ವೇ ವರದಿ ಬಂದ ಮೇಲೆ ಪಾಪ ಲಕ್ಷ್ಮಣ್ ಅವರನ್ನು ನಿಲ್ಲಿದ್ದೀರಿ. ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದೀರಿ. ಮೈಸೂರಲ್ಲಿ ಯದುವೀರ್, ಮಂಡ್ಯದಿಂದ ಕುಮಾರಸ್ವಾಮಿ ಗೆಲ್ಲಬೇಕು ಎಂದು ವಿಶ್ವನಾಥ್ ಹೇಳಿದರು.

ಹಿಂದಿನ ಲೇಖನಮಂಗಳೂರು: ಬಂದರು ಪ್ರದೇಶದ ಮನೆಯಲ್ಲಿ ಅಗ್ನಿ ಅವಘಡ
ಮುಂದಿನ ಲೇಖನ“ಅವತಾರ ಪುರುಷ-2′  ಸಿನಿಮಾ ವಿಮರ್ಶೆ