ಕೋಲ್ಹಪುರ : ಇತ್ತೀಚಿಗೆ ಬೆಳಗಾವಿಯಲ್ಲಿ ಕರ್ನಾಟಕದ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದ ಘಟನೆ ಎರಡು ರಾಜ್ಯಗಳ ಬಸ್ ಸ್ಥಗಿತವಾಗುವ ಮಟ್ಟಿಗೆ ಈ ಒಂದು ಘಟನೆ ದೊಡ್ಡದಾಗಿತ್ತು ಇದೀಗ ಮಹಾರಾಷ್ಟ್ರದಲ್ಲಿ ಮತ್ತೆ ಪುಂಡರು ಬಾಲ ಬಿತ್ತಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ನಡೆದಿದೆ.
ಹೌದು ಕರ್ನಾಟಕ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿದ್ದು, ಮಹಾರಾಷ್ಟ್ರದ ಇಂಚಲಕರಂಜಿ ಬಳಿ ಈ ಒಂದು ಘಟನೆ ನಡೆದಿದೆ. ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಕಲ್ಲುತೂರಾಟಕ್ಕೆ ನಿಖರವಾದ ಅಂತಹ ಕಾರಣ ತಿಳಿದು ಬಂದಿಲ್ಲ. ಕಲ್ಲುತೂರಾಟದಿಂದ ಬಸ್ ಹಿಂದಿನ ಗಾಜು ಪುಡಿಪುಡಿ ಆಗಿದೆ.