ಮನೆ ರಾಜ್ಯ ಸರ್ಕಾರಿ ಬಸ್ ಚಾಲಕನ ದರ್ಪ; ವಿದ್ಯಾರ್ಥಿಗಳು ಹೈರಾಣು

ಸರ್ಕಾರಿ ಬಸ್ ಚಾಲಕನ ದರ್ಪ; ವಿದ್ಯಾರ್ಥಿಗಳು ಹೈರಾಣು

0

ಶ್ರೀರಂಗಪಟ್ಟಣ: ತಾಲೂಕಿನ ಚಿನ್ನೆನಹಳ್ಳಿ ವಿದ್ಯಾರ್ಥಿಗಳಿಂದ ಶುಕ್ರವಾರ ರಾತ್ರಿ 7  ರ ಸಮಯದಲ್ಲಿ ಪ್ರತಿದಿನ ಸರ್ಕಾರಿ ಬಸ್ ಸಮಯಕ್ಕೆ ತಕ್ಕಂತೆ ಬಾರದ ಕಾರಣ ಹಾಗೂ ಸಮಯಕ್ಕೆ ಬಾರದ ಬಸ್ ಚಾಲಕನನ್ನು ಪ್ರಶ್ನೆ ಮಾಡಲಾಗಿ ದರ್ಪದಿಂದ ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಯತ್ನಿಸಿರುವ ಘಟನೆ ನಡೆದಿದೆ.

Join Our Whatsapp Group

ಇದರಿಂದ ಹೈರಾಣದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು.

ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಶಾಲಾ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಸಮಸ್ಯೆಯು ಕಳೆದ 4 ತಿಂಗಳುಗಳಿಂದ ಆರಂಭವಾಗಿ ಈವರೆಗೂ ಬಗೆಹರಿಯದೆ ಪ್ರತಿನಿತ್ಯ ಬೆಳಿಗ್ಗೆ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಹಾಗೂ ಶಾಲಾ ಮುಗಿದ ನಂತರ ಮನೆಗೆ ತೆರಳುವಾಗ ಸಹ ತಡವಾಗಿ ಹೋಗುವ ಪರಿಸ್ಥಿತಿ ಏರ್ಪಟ್ಟಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸದಿದ್ದರೆ ವಿದ್ಯಾರ್ಥಿಗಳೇ ಹೋರಾಟಕ್ಕೆ ಮುಂದಾಗುತ್ತೇವೆಂದು ಎಚ್ಚರಿಸಿದ್ದಾರೆ.