ಮನೆ ರಾಜ್ಯ ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸರ್ಕಾರ ಅಸ್ತು

ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸರ್ಕಾರ ಅಸ್ತು

0

ಬೆಂಗಳೂರು: ಮುಡಾ ವಿವಾದ ಬೆನ್ನಲ್ಲೇ ಪ್ರತ್ಯೇಕ ಕಾಯ್ದೆಗೆ ರಚನೆಗೆ ಸರ್ಕಾರ ಅಸ್ತು ಎಂದಿದೆ.

Join Our Whatsapp Group

ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕೆ ಕಾಯ್ದೆ ರಚನೆಯಾಗಲಿದ್ದು, ಮುಂದಿನ ವಾರ ಅಧಿವೇಶನದಲ್ಲಿ ಬಿಲ್ ಮಂಡನೆಯಾಗಲಿದೆ.

ಈವರೆಗೂ ಮುಡಾ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿತ್ತು. 1987ರ ಕಾಯ್ದೆ ಅನ್ವಯ ಮುಡಾ ಕಾರ್ಯನಿರ್ವಹಿಸುತ್ತಿದೆ. ಈಗ ಬಿಡಿಎ ಮಾದರಿಯಲ್ಲೇ ಮುಡಾಗೆ ಪ್ರತ್ಯೇಕ ಕಾಯ್ದೆಗೆ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯಂತೆ ಭೂಸ್ವಾಧೀನ, ಸೈಟ್​ ಹಂಚಿಕೆ ಮತ್ತು ನಕ್ಷೆ ಮಂಜೂರಾತಿ ಮಾಡಲಾಗಿದೆ.

ಈ ಮೊದಲು 100ಕ್ಕೂ ಹೆಚ್ಚು ರಾಜಕೀಯ ನಾಯಕರೇ ಮುಡಾ ಸದಸ್ಯರಾಗಿದ್ದರು. ಹಾಗಾಗಿ ನೂತನ ಕಾಯ್ದೆ ಪ್ರಕಾರ 3 ರಿಂದ 4 ರಾಜಕೀಯ ನಾಯಕರಿಗಷ್ಟೇ ಸದಸ್ಯರಾಗಲು ಅವಕಾಶವಿರುತ್ತದೆ. ನೂತನ ಕಾಯ್ದೆ ಪ್ರಕಾರ ಬಹುತೇಕ ಅಧಿಕಾರಿಗಳಿಗೆ ಹೆಚ್ಚು ಅವಕಾಶವಿರಲಿದ್ದು, ಬಿಡಿಎ ಮಾದರಿಯಲ್ಲಿ ಅಧಿಕಾರಿಗಳು ಬೋರ್ಡ್​​​ನಲ್ಲಿರುತ್ತಾರೆ.