ಮನೆ ರಾಜ್ಯ ಡಿಸೆಂಬರ್ ನಲ್ಲಿ ಯುವ ನಿಧಿ ಯೋಜನೆ ಜಾರಿ: ಸಚಿವ ಕೆ.ಹೆಚ್.ಮುನಿಯಪ್ಪ

ಡಿಸೆಂಬರ್ ನಲ್ಲಿ ಯುವ ನಿಧಿ ಯೋಜನೆ ಜಾರಿ: ಸಚಿವ ಕೆ.ಹೆಚ್.ಮುನಿಯಪ್ಪ

0

ದಾವಣಗೆರೆ: ಐದನೇ ಗ್ಯಾರಂಟಿ ಯೋಜನೆಯಾಗಿರುವ ‘ಯುವ ನಿಧಿ’ ಯೋಜನೆಯನ್ನು ಡಿಸೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಘೋಷಿಸಿದ ಐದು ಯೋಜನೆಗಳ ಪೈಕಿ ಮೂರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ನಾಲ್ಕನೇ ಯೋಜನೆ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 30 ರಂದು ಜಾರಿಗೆ ತರಲಾಗುವುದು ಎಂದರು.

ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ನಾಲ್ಕನೇ ಭರವಸೆಯಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ನಾಳೆ ಜಾರಿಗೊಳಿಸುತ್ತಿದ್ದೇವೆ. ಉದ್ಘಾಟನಾ ಕಾರ್ಯಕ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ ನಲ್ಲಿ ಯುವ ನಿಧಿ ಯೋಜನೆಯೂ ಜಾರಿಯಾಗಲಿದೆ ಎಂದರು.

ಹಿಂದಿನ ಲೇಖನಶೃಂಗೇರಿ ದೇವಸ್ಧಾನ
ಮುಂದಿನ ಲೇಖನಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ‌