ಮಂಡ್ಯ: ಮಳೆ ಬರದಿದ್ದರೇ ಬರಗಾಲ ಘೋಷಣೆ ಮತ್ತು ಮೋಡ ಬಿತ್ತನೆ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಮಾಡಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಚಿಕ್ಕಮಗಳೂರಿಗೆ ಮಳೆಗಾಗಿ ಪೂಜೆ ಮಾಡಿ ಬಂದಿದ್ದೇವೆ. ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳ ಒಳಗೆ ಒಳ್ಳೆಯ ಮಳೆ ಬರಲಿದೆ ಎಂದ ವರದಿ ಇದೆ ಎಂದರು.
ಆಶಾದಾಯಕವಾಗಿ ಇರಬೇಕಾದದ್ದು ಅನಿರ್ವಾಯತೆ. ಕೆಆರ್ಎಸ್ ಒಳಹರಿವು ಕೂಡ ಕಡಿಮೆ ಆಗಿದೆ. ಸಮಸ್ಯೆಯಂತು ಇದೆ. ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡುವುದು. ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡುತ್ತದೆ. ಕ್ಯಾಬಿನೆಟ್ ಸಬ್ ಕಮಿಟಿ ಈಗಾಗಲೇ ಒಂದು ಸಭೆ ಮಾಡಿದೆ. ಕೆಲವೊಂದು ಮಾನದಂಡದ ನಂತರ ಬರಗಾಲ ಘೋಷಣೆ ಮಾಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
Saval TV on YouTube