ಮನೆ ರಾಷ್ಟ್ರೀಯ ಶಾಸಕರ ಕುಟುಂಬಕ್ಕೆ ನೀಡಿದ ಭದ್ರತೆ ಹಿಂಪಡೆದ ಸರ್ಕಾರ: ಏಕನಾಥ ಶಿಂಧೆ ಕೆಂಡ

ಶಾಸಕರ ಕುಟುಂಬಕ್ಕೆ ನೀಡಿದ ಭದ್ರತೆ ಹಿಂಪಡೆದ ಸರ್ಕಾರ: ಏಕನಾಥ ಶಿಂಧೆ ಕೆಂಡ

0

ಮಹಾರಾಷ್ಟ್ರ (Maharashtra): ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರಾಗಿದ್ದ ಏಕನಾಥ್ ಶಿಂಧೆ ಅವರ ಬಂಡಾಯವು ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದ ಭವಿಷ್ಯಕ್ಕೆ ಅಡ್ಡಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​​ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ.

ಈ ನಡುವೆ ಬಂಡಾಯ ಎದ್ದಿರುವ ಶಿವಸೇನಾದ ಎಲ್ಲ ಶಾಸಕರ ಕುಟುಂಬಗಳಿಗೆ ನೀಡಿರುವ ವಿವಿಧ ರೀತಿಯ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಈ ವಿಧ್ಯಮಾನ ಬಂಡಾಯ ಶಾಸಕರನ್ನು ಕೆರಳುವಂತೆ ಮಾಡಿದ್ದು, ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ಅವರು, ಸಿಎಂ ಠಾಕ್ರೆ ಅವರಿಗೆ ಪತ್ರ ಬರೆದು ನಮ್ಮ ಕುಟುಂಬಗಳಿಗೆ ಏನಾದರೂ ಆದರೆ ಅದಕ್ಕೆ ಸಂಪೂರ್ಣ ನೀವೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಶಿವಸೇನಾದ 38 ಶಾಸಕರ ಕುಟುಂಬಗಳಿಗೆ ನೀಡಿರುವ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದ್ದು,  ಶಿಂಧೆ ಅವರು ತಮ್ಮ ಪತ್ರವನ್ನು ಡಿಜಿಪಿ ಅವರಿಗೂ ಕಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಿವಸೇನಾದ ಸಂಸದ ಸಂಜಯ್ ರಾವುತ್ ಅವರು, ಶಾಸಕರಿಗೆ ಮಾತ್ರ ಭದ್ರತೆ ನೀಡಲಾಗುತ್ತದೆ. ಅವರ ಕುಟುಂಬದ ಭದ್ರತೆ ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಹೇಳಿದ್ದಾರೆ.

ಆದರೆ, ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ಪಾಟೀಲ್ , ಶಿವಸೇನಾದ ಶಾಸಕರ ಕುಟುಂಬಗಳಿಗೆ ನೀಡಲಾದ ಭದ್ರತೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಹಿಂದಿನ ಲೇಖನ7 ಭ್ರೂಣಗಳ ಪತ್ತೆ ಪ್ರಕರಣ: ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ ಡಿಎಚ್‌ಒ
ಮುಂದಿನ ಲೇಖನಮೈಸೂರು ಅಭಿವೃದ್ಧಿ ಯೋಜನೆಗಳ ಚರ್ಚೆ: ಪ್ರತಾಪ್ ಸಿಂಹ ಪಂಥಾಹ್ವಾನಕ್ಕೆ ಡೇಟ್ ಫಿಕ್ಸ್ ಮಾಡಿದ ಎಂ. ಲಕ್ಷ್ಮಣ್