ಮನೆ ರಾಜಕೀಯ ಪ್ರಧಾನಿ ಮೌನದಿಂದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ಮೌನದಿಂದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ: ರಾಹುಲ್ ಗಾಂಧಿ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೌನದಿಂದ ಪಕ್ಕದ ಚೀನಾದ ಗಡಿ ಆಕ್ರಮಣ ಉತ್ಸಾಹ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲಡಾಖ್ ಬಳಿಯ ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ಉತ್ತರ ತೀರಕ್ಕೆ  ಚೀನಾ ನಿರ್ಮಿಸುತ್ತಿದೆ ಎನ್ನಲಾದ ಉಪಗ್ರಹ ಆಧಾರಿತ ವಿಡಿಯೊ ಒಂದನ್ನು ಬುಧವಾರ ಟ್ವಿಟರ್‌ನಲ್ಲಿ ಹಂಚಿಕೊಂಡು ಅವರು ಈ ಆರೋಪ ಮಾಡಿದ್ದಾರೆ.‘ ಸೇತುವೆ ನಿರ್ಮಾಣವಾಗುತ್ತಿರುವ ಹಾಗೂ ಅಲ್ಲಿ ಬೃಹತ್ ಕ್ರೇನ್‌ಗಳು ಬೀಡು ಬಿಟ್ಟಿರುವ ದೃಶ್ಯಗಳನ್ನು ವಿಡಿಯೊದಲ್ಲಿ ನೋಡಬಹುದಾಗಿದೆ.

ಚೀನಾ ನಮ್ಮ ದೇಶದಲ್ಲಿ ರಾಜತಾಂತ್ರಿಕ ಸೇತುವೆಯನ್ನು ನಿರ್ಮಿಸುತ್ತಿದೆ. ಪ್ರಧಾನಿಯವರ ಮೌನದಿಂದಾಗಿ ಪಿಎಲ್‌ಎ (ಚೀನಾ ಸೇನೆ) ಉತ್ಸಾಹ ಹೆಚ್ಚುತ್ತಿದೆ. ಈ ಸೇತುವೆಯನ್ನು ಉದ್ಘಾಟನೆ ಮಾಡಲು ನಮ್ಮ ಪ್ರಧಾನಿ ಹೋದರೂ ಹೋಗಬಹುದು ಎಂಬ ಭಯವಿದೆ’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹಿಂದಿನ ಲೇಖನಮಲ್ಲೇಶ್ವರಂ: ಕೊರೋನಾ ಪರೀಕ್ಷೆಗೆ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆ
ಮುಂದಿನ ಲೇಖನಸಿದ್ದರಾಮಯ್ಯರಿಗೆ ಅಧಿಕಾರದಲ್ಲಿರುವಾಗ ಮಹನೀಯರು ನೆನಪಾಗುವುದಿಲ್ಲ: ಪ್ರತಾಪ್ ಸಿಂಹ