ಬೆಂಗಳೂರು: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯಿಂದ ಹೊಸ ಯೋಜನೆ ರೂಪಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ಭಯ ಯೋಜನೆ ಅಡಿಯಲ್ಲಿ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ 24/7 ಕೆಲಸ ಮಾಡುವ ಕಾಲ್ ಸೆಂಟರ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರಿಬ್ಬನ್ ಕಟ್ ಮಾಡುವ ಮೂಲಕ ಓಪನ್ ಮಾಡಿದ್ದಾರೆ.
ಜಿಪಿಎಸ್ ಪ್ಯಾನಿಕ್ ಬಟನ್ ಹಾಕಿಸಿಕೊಂಡಿರುವ ವಾಹನಗಳ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತದೆ. ಇತ್ತೀಚೆಗೆ ಓಲಾ ಉಬರ್ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಆಕ್ಸಿಡೆಂಟ್, ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ವು. ಇದನ್ನು ತಡೆಗಟ್ಟಲು ರಾಜ್ಯ ಸಾರಿಗೆ ಇಲಾಖೆ ರಾಜ್ಯದ ಸುಮಾರು ಆರು ಲಕ್ಷ ಯೆಲ್ಲೋ ಬೋರ್ಡ್ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಆದೇಶ ನೀಡಿದೆ. ಸೆಪ್ಟೆಂಬರ್ 10 ರೊಳಗೆ ಎಲ್ಲಾ ವಾಣಿಜ್ಯ ಬಳಕೆ ವಾಹನಗಳಿಗೆ ಹಾಕಿಸಿಕೊಳ್ಳಲು ಡೆಡ್ಲೆನ್ ನೀಡಲಾಗಿದೆ.
ಈ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ನಿಂದ ವಾಹನ ಎಲ್ಲಿದೆ, ಯಾವ ರೂಟ್ ನಲ್ಲಿ ಸಂಚಾರ ಮಾಡುತ್ತಿದೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಆರ್ಟಿಓ ಕಂಟ್ರೋಲ್ ರೂಮ್ಗೆ ನೀಡುತ್ತದೆ. ಕೂಡಲೇ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ ಮಹಿಳೆಯರು ಇರುವ ಹತ್ತಿರ ಪೊಲೀಸ್ ಸ್ಟೇಷನ್ ಗೆ ಆರ್ಟಿಓ ಕಂಟ್ರೋಲ್ ರೂಮ್ ನಿಂದ ಮಾಹಿತಿ ನೀಡಲಾಗುತ್ತದೆ. ನಂತರ ಸ್ಥಳೀಯ ಪೊಲೀಸ್ ಸ್ಟೇಷನ್ನಿಂದ ಪೋಲಿಸರು ಆ ಸ್ಥಳಕ್ಕೆ ಹೊಯ್ಸಳ, ಪೊಲೀಸ್ ಜೀಪ್ ಮೂಲಕ ಆಗಮಿಸಿ ರಕ್ಷಣೆ ನೀಡುತ್ತಾರೆ.
ಇನ್ನೂ ರಾಜ್ಯದ ಆರು ಲಕ್ಷ ವಾಹನಗಳ ಪೈಕಿ ಸದ್ಯ 1,085 ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳಲಾಗಿದೆ. ಕೆಎಸ್ಆರ್ಟಿಸಿ ಬಸ್ಸು, ಬಿಎಂಟಿಸಿ ಬಸ್ಸು, ಕ್ಯಾಬ್, ಖಾಸಗಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳ ಸಂಪೂರ್ಣ ಲೈವ್ ಲೋಕೆಷನ್ ಡ್ರೈವರ್ ಮತ್ತು ಮಾಲೀಕನ ಪೋನ್ ನಂಬರ್, ಮನೆ ವಿಳಾಸ ಎಲ್ಲಾವು ಲಭ್ಯವಾಗುತ್ತದೆ.
ಒಂದು ವೇಳೆ ಜಿಪಿಎಸ್ ಪ್ಯಾನಿಕ್ ಬಟನ್ ಹಾಕಿಸಿಕೊಂಡು ಪ್ರಯಾಣ ಮಾಡುವ ಸಂದರ್ಭದಲ್ಲಿ ಕಿರುಕುಳ, ಪ್ರಯಾಣಿಕರಿಗೆ ತೊಂದರೆ ನೀಡುವ ಉದ್ದೇಶದಿಂದ ಅದನ್ನು ಕಿತ್ತು ಬಿಸಾಕಲು ಪ್ರಯತ್ನ ಪಟ್ಟರೂ ಅಂತಹ ವಾಹನಗಳ ಮಾಹಿತಿಯನ್ನು ಆರ್ಟಿಓ ಕಂಟ್ರೋಲ್ ರೂಮ್ ಗೆ ಮಾಹಿತಿ ತಿಳಿಯುತ್ತದೆ. ಆರ್ಟಿಓನ ಕಂಟ್ರೋಲ್ ರೂಮ್ ಮತ್ತು ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ರಾಜಧಾನಿಯ ಪ್ರತಿ ವಾಹನದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಹಾಯ ಆಗಲಿದೆ.