ಮೈಸೂರು: ಕೆ.ಆರ್.ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಕ್ಯೂರಿಟಿ ಹಾಗೂ ಹೌಸ್ ಕೀಪಿಂಗ್ ಕಾರ್ಮಿಕರ ಕುಂದುಕೊರತೆ ಕೇಳಲು ಮಾರ್ಚ್ 24ರ ಬೆಳಿಗ್ಗೆ 10:00 ಗಂಟೆಗೆ ಮೈಸೂರಿನ ಚಾಮುಂಡಿ ಅತಿಥಿಗೃಹದಲ್ಲಿ ಸಭೆ ಕರೆಯಲಾಗಿದೆ.
ದಲಿತ ಸಂಘರ್ಷಸಮಿತಿ (ಬಣ ರಹಿತ ) ಮೈಸೂರು ಜಿಲ್ಲಾ ಶಾಖೆ ಪದಾಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ಸಂಚಾಲಕರುಗಳು ಹಾಗೂ ಎಲ್ಲಾ ಕಾರ್ಮಿಕರು ತಪ್ಪದೆ ಭಾಗವಹಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಬಣ ರಹಿತ ) ಜಿಲ್ಲಾ ಸಂಚಾಲಕರು ಸಿ. ಉಮಾಮಹದೇವ ಮನವಿ ಮಾಡಿದ್ದಾರೆ.