ಮನೆ ಕಾನೂನು ಹಜ್, ಉಮ್ರಾ ಯಾತ್ರೆಗೆ ಜಿಎಸ್‌ಟಿ: ಪ್ರವಾಸ ಆಯೋಜಕರ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಹಜ್, ಉಮ್ರಾ ಯಾತ್ರೆಗೆ ಜಿಎಸ್‌ಟಿ: ಪ್ರವಾಸ ಆಯೋಜಕರ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

0

ಹಜ್, ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಕ್ಕೆ ತೆರಳುವ ಯಾತ್ರಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಹಜ್‌ ಯಾತ್ರಿಗಳಿಗೆ ವಿಭಿನ್ನ ಬಗೆಯ ಜಿಎಸ್‌ಟಿ ವಿಧಿಸುವುದನ್ನು ಪ್ರಶ್ನಿಸಿ ವಿವಿಧ ಪ್ರವಾಸ ಆಯೋಜಕರು (ಟೂರ್‌ ಆಪರೇಟರ್‌) ಹಾಗೂ ರಾಜ್ಯ ಹಜ್‌ ಸಂಘಟಕರು ಸಲ್ಲಿಸಿದ್ದ ಹದಿನೇಳು ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಎ ಎಸ್ ಓಕಾ ಹಾಗೂ ಸಿಟಿ ರವಿಕುಮಾರ್ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.

ಗಡಿಯಾಚೆಗಿನ ಚಟುವಟಿಕೆಗಳಿಗೆ ಜಿಎಸ್‌ಟಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ತೆರಿಗೆಯು ತಾರತಮ್ಯದಿಂದ ಕೂಡಿದೆ. ಭಾರತೀಯ ಹಜ್‌ ಸಮಿತಿಯ ಮುಖೇನ ಹಜ್‌ ಯಾತ್ರೆ ಮಾಡುವ ಕೆಲ ಹಾಜಿಗಳಿಗೆ ತೆರಿಗೆ ವಿನಾಯತಿ ಸೌಲಭ್ಯವಿದೆ ಎಂದು ಅವರು ನ್ಯಾಯಾಲಯದ ಗಮನ ಸೆಳೆದಿದದ್ದರು.