ಮನೆ ರಾಜ್ಯ ಮುಸ್ಲಿಂ ಯುವಕನ ಹೆಸರಿನಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ಫೇಕ್ ಅಕೌಂಟ್: ಎಂ ಲಕ್ಷ್ಮಣ್

ಮುಸ್ಲಿಂ ಯುವಕನ ಹೆಸರಿನಲ್ಲಿ ಬಿಜೆಪಿ ಮುಖಂಡನ ಪುತ್ರನಿಂದ ಫೇಕ್ ಅಕೌಂಟ್: ಎಂ ಲಕ್ಷ್ಮಣ್

0

ಮೈಸೂರು(Mysuru): ಕೊಡಗಿನಲ್ಲಿ ಮುಸ್ಲಿಂ ಯುವಕನ ಹೆಸರಿನಲ್ಲಿ ಫೇಕ್ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿರುವುದು ಬಿಜೆಪಿ ಮುಖಂಡನ ಪುತ್ರ  ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿವರು ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಯುವಕ ಮಹಮದ್ ಅಸ್ಮಾಕ್ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಅಸಹ್ಯಕರವಾದ ಸಂದೇಶಗಳನ್ನು ಹರಿಬಿಟ್ಟಿದ್ದಾರೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ ವ್ಯಕ್ತಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪೊನ್ನಪ್ಪನ ಮಗ ದಿವಿನ್ ಬೂಪಯ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.

ಇವರು ಎಂಎಲ್ಸಿ ರವಿ ಕುಶಾಲಪ್ಪ, ಕೆಜಿ ಬೋಪಯ್ಯ ಮತ್ತು ಪ್ರತಾಪ್ ಸಿಂಹ ಅವರ  ಆಪ್ತರಾಗಿದ್ದಾರೆ. ಇವರ ಕುಮ್ಮಕ್ಕಿನಿಂದ ಇಂತಹ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ..? ಇದರ ಹಿಂದೆ ಇರುವ ಕುಮ್ಮಕ್ಕು ನೀಡುವ  ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಇವರನ್ನು ಬಂಧಿಸಬೇಕು ಎಂದು ಎಂ ಲಕ್ಷ್ಮಣ್ ಕಿಡಿಕಾರಿದರು.

ಯಡಿಯೂರಪ್ಪ ರಿಮೋಟ್ ಕಂಟ್ರೋಲ್ ಅಷ್ಟೇ: ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರ ಬಗ್ಗೆ ಟೀಕಿಸಿದ ಎಂ ಲಕ್ಷ್ಮಣ್ , ಮೇಲ್ಮಟ್ಟದಲ್ಲಿರುವ ಆ ಇಬ್ಬರಿದ್ದಾರಲ್ಲ ಅವರು ಮಾರ್ವಾಡಿಗಳು. ಅವರು ವ್ಯಾಪಾರ ದೃಷ್ಟಿಯಿಂದಲೇ ನೋಡ್ತಾರೆ. ಉಪಯೋಗಿಸಿಕೊಂಡ ಮೇಲೆ ಮೂಲೆ ಗುಂಪು ಮಾಡ್ತಾರೆ. ಯಡಿಯೂರಪ್ಪ ನವರು ರಿಮೋಟ್ ಕಂಟ್ರೋಲ್ ಅಷ್ಟೇ. ಅವರ ಮಗನಿಗೂ 100% ಟಿಕೆಟ್ ಕೊಡಲ್ಲ.ವೀರಶೈವರು ಈಗಲಾದ್ರೂ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಒಂದು ಕಡೆ ಗೋಹತ್ಯೆ ನಿಷೇಧ ಮಾಡೋರು ಇವರೇ. ಇನ್ನೊಂದು ಕಡೆ ಗೋಮಾಂಸ, ಹಂದಿ ಮಾಂಸ ಮಾರಾಟ ಮಾಡುವವರೂ ಇವರೇ. ಸಂಸದೆ ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ತೆರೆದಿರುವ ಬಾರ್ ಅಂಡ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನಲ್ಲಿ ದನ, ಹಂದಿ ಮಾಂಸದ ಮೆನುವಿದೆ. ಅವರ ಅಕ್ರಮ ರೆಸ್ಟೋರೆಂಟ್ ಗೆ ನೋಟೀಸ್ ನೀಡಿದ ಎಸ್ ಪಿ ಮತ್ತು ಡಿಸಿ C ಅವರನ್ನೇ ಸಸ್ಪೆಂಡ್ ಮಾಡ್ತಾರೆ. ಇದು ಬಿಜೆಪಿಯವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿಯವರ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ಸುಳ್ಳು ಹೇಳುವುದನ್ನ ಬಿಡಬೇಕು. ನಾವು ಹಿಟ್ ಅಂಡ್ ರನ್ ಕೇಸ್ ಮಾಡಲ್ಲ. ಕಾಂಗ್ರೆಸ್ ಸರ್ಕಾರ 2015 ಮಾರ್ಚ್ 17 ರಂದೇ ಶಿಫಾರಸ್ಸು ಮಾಡಿತ್ತು. ಈಗ ನಾನು ಮಾಡಿದ್ದು ಅಂಥಾ ಪ್ರತಾಪ್ ಸಿಂಹ ಕೊಚ್ಚಕೊಳ್ತಾರೆ ಎಂದು ಹರಿಹಾಯ್ದರು.

ಹಿಂದಿನ ಲೇಖನಲಂಚಕ್ಕೆ ಬೇಡಿಕೆ: ಆರೋಗ್ಯ ಇಲಾಖೆ ಸಿಬ್ಬಂದಿ ಎಸಿಬಿ ಬಲೆಗೆ
ಮುಂದಿನ ಲೇಖನಹಜ್, ಉಮ್ರಾ ಯಾತ್ರೆಗೆ ಜಿಎಸ್‌ಟಿ: ಪ್ರವಾಸ ಆಯೋಜಕರ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌