ಬೆಂಗಳೂರು : ಗ್ಯಾಸ್ ವಿತರಣೆಗೆ ಕರ್ನಾಟಕ ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ಆದರೆ, ಹೋಟೆಲ್ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ.
ನಾಳೆಯಿಂದ ಗ್ಯಾಸ್ ವಿತರಣೆಗೆ ಸರ್ಕಾರ ಸೂಚಿಸಿದೆ. ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಗ್ಯಾಸ್?
- ಆಸ್ಪತ್ರೆ – 100%
- ಶಿಕ್ಷಣ ಸಂಸ್ಥೆಗಳಿಗೆ- 100%
- ಸೀಡ್ ಪ್ರೋಸೆಸಿಂಗ್ – 70%
- ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
- ಏರ್ ಲೈನ್ಸ್, ರೈಲ್ವೆ – 70%
- ಸೀಡ್ ಪ್ರೋಸೆಸಿಂಗ್ – 70%
- ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
- ಏರ್ಲೈನ್ಸ್, ರೈಲ್ವೆ – 70%
- ಇಂಡಸ್ಟ್ರೀಯಲ್ ಕ್ಯಾಂಟಿನ್ – 10% ಗ್ಯಾಸ್
- ಕಾರ್ಪೋರೇಟ್ ಗೆಸ್ಟ್ ಹೌಸ್ – 10%
- ಫುಡ್ ಪ್ರೋಸೆಸಿಂಗ್ ಕಂಪನಿ – 10%
- ವದ್ಧಾಶ್ರಮಗಳಿಗೆ – 70%
- ಹೋಟೆಲ್ – 10%
ಹೋಟೆಲ್ಗಳಿಗೆ ಇಂದಿನಿಂದ ಕಮರ್ಷಿಯಲ್ ಗ್ಯಾಸ್ ವಿತರಣೆ ಸರ್ಕಾರ ಸೂಚನೆ ನೀಡಿದೆ. 10% ಅಷ್ಟೇ ಕಮರ್ಷಿಯಲ್ ಗ್ಯಾಸ್ ವಿತರಣೆ ಮಾಡಬೇಕೆಂದು ತಿಳಿಸಿದೆ. ಹೋಟೆಲ್ ಗಳು ಇಂದಿನಿಂದ ಕಮರ್ಷಿಯಲ್ ಗ್ಯಾಸ್ ಬುಕ್ ಮಾಡಬಹುದಾಗಿದೆ.















