ಮನೆ ಕ್ರೀಡೆ ಐಪಿಎಲ್:‌ ಕೆಕೆಆರ್‌ ವಿರುದ್ಧ ಗುಜರಾತ್ ಟೈಟಾನ್ಸ್ 8 ರನ್‌ಗಳ ಜಯ

ಐಪಿಎಲ್:‌ ಕೆಕೆಆರ್‌ ವಿರುದ್ಧ ಗುಜರಾತ್ ಟೈಟಾನ್ಸ್ 8 ರನ್‌ಗಳ ಜಯ

0

ಮುಂಬೈ (Mumbai)-ಐಪಿಎಲ್‌ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 8 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಮುಂಬೈನ ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಟೈಟನ್ಸ್ ತಂಡ ಕೆಕೆಆರ್‌ ಗೆ 156 ರನ್‌ ಗಳ ಗುರಿ ನೀಡಿತು.

ಈ ಮೊತ್ತವನ್ನು ಬೆನ್ನತ್ತಿದ್ದ ಕೆಕೆಆರ್‌ ಆಂಡ್ರೆ ರಸೆಲ್‌(48 ರನ್‌, 4 ವಿಕೆಟ್‌) ಅವರ ಆಲ್‌ರೌಂಡರ್‌ ಪ್ರದರ್ಶನದ ಹೊರತಾಗಿಯೂ ಸೋಲನ್ನು ಅನುಭವಿಸಿತು. ಆ ಮೂಲಕ ಕೆಕೆಆರ್‌ ಸತತ 4ನೇ ಸೋಲಿನ ಮುಖಭಂಗ ಅನುಭವಿಸಿತು.

ಕೆಕೆಆರ್ ಪರ ರಿಂಕು ಸಿಂಗ್‌(35) ಹಾಗೂ ಆಂಡ್ರೆ ರಸೆಲ್‌(48) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಗುಜರಾತ್‌ ಬೌಲರ್‌ಗಳ ಎದುರು ಮಕಾಡೆ ಮಲಗಿದರು. ಆದರೆ, ಬೌಲಿಂಗ್‌ನಲ್ಲಿ ಒಂದು ಓವರ್‌ಗೆ ಕೇವಲ 5 ರನ್‌ ನೀಡಿ 4 ವಿಕೆಟ್‌ ಕಬಳಿಸಿದ್ದ ಆಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಿದ್ದರು. ಕೇವಲ 25 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್‌ ಮತ್ತು ಒಂದು ಬೌಂಡರಿಯೊಂದಿಗೆ 48 ರನ್ ಗಳಿಸಿ ಕೆಕೆಆರ್‌ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, 20ನೇ ಓವರ್‌ನಲ್ಲಿ ಅಲ್ಝಾರಿ ಜೋಸೆಫ್‌ ಅವರ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಕೆಕೆಆರ್‌ ಗೆಲುವಿನ ಕನಸು ಭಗ್ನವಾಯಿತು.

ಇನ್ನು ಈ ಗೆಲುವಿನೊಂದಿಗೆ 12 ಅಂಕಗಳನ್ನು ಕಲೆ ಹಾಕಿರುವ ಹಾರ್ದಿಕ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ತಂಡ ಹಾರ್ದಿಕ್‌ ಪಾಂಡ್ಯ(67) ಅರ್ಧಶತಕದ ಹೊರತಾಗಿಯೂ ಆಂಡ್ರೆ ರಸೆಲ್‌(5ಕ್ಕೆ4) ಹಾಗೂ ಟಿಮ್‌ ಸೌಥಿ(24ಕ್ಕೆ3) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್‌ ಟೈಟನ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 156 ರನ್‌ಗಳಿಸಷ್ಟೇ ಶಕ್ತವಾಯಿತು.

ಸ್ಕೋರ್‌ ವಿವರ:

ಗುಜರಾತ್‌ ಟೈಟನ್ಸ್: 20 ಓವರ್‌ಗಳಿಗೆ 156/9 (ಹಾರ್ದಿಕ್‌ ಪಾಂಡ್ಯ 67, ಡೇವಿಡ್‌ ಮಿಲ್ಲರ್‌ 27, ವೃದ್ದಿಮಾನ್‌ ಸಹಾ 25, ಆಂಡ್ರೆ ರಸೆಲ್‌ 5ಕ್ಕೆ 4, ಟಿಮ್‌ ಸೌಥಿ 24ಕ್ಕೆ 3)

ಕೋಲ್ಕತಾ ನೈಟ್‌ ರೈಡರ್ಸ್‌: 20 ಓವರ್‌ಗಳಿಗೆ 148/8 (ಆಂಡ್ರೆ ರಸೆಲ್‌ 48, ರಿಂಕು ಸಿಂಗ್‌ 35; ಮೊಹಮ್ಮದ್‌ ಶಂಇ 20ಕ್ಕೆ 2, ರಶೀದ್‌ ಖಾನ್ 22ಕ್ಕೆ