ಮನೆ ರಾಜ್ಯ ಕೆಆರ್’ಎಸ್ ಜಲಾಶಯದ ಒಳಹರಿವು ಹೆಚ್ಚಳ

ಕೆಆರ್’ಎಸ್ ಜಲಾಶಯದ ಒಳಹರಿವು ಹೆಚ್ಚಳ

0

ಮಂಡ್ಯ(Mandya): ಮಡಿಕೇರಿ ಜಿಲ್ಲೆಯಾದ್ಯಾಂತ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಾಗಿದ್ದು, 30 ಸಾವಿರ ಕ್ಯುಸೆಕ್‌ ದಾಟಿದೆ.

ಬುಧವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 115.70 ಅಡಿಗೆ ತಲುಪಿದೆ. ಕಳೆದ ಮೂರು ದಿನಗಳಿಂದೀಚೆಗೆ ಜಲಾಶಯಕ್ಕೆ 7 ಅಡಿಯಷ್ಟು ನೀರು ಹರಿದು ಬಂದಿದೆ.

ಜುಲೈ 3ರಂದು ಜಲಾಶಯದ ನೀರಿನ ಮಟ್ಟ 108.80 ಅಡಿ ಇತ್ತು, 8,769 ಕ್ಯುಸೆಕ್‌ ಒಳಹರಿವು, 1,218 ಕ್ಯುಸೆಕ್‌ ಹೊರಹರಿವು ಇತ್ತು. ಬುಧವಾರ ನೀರಿನ ಮಟ್ಟ 115 ಅಡಿ ದಾಟಿದ್ದು 30,923 ಕ್ಯುಸೆಕ್‌ ಒಳಹರಿವು, 3,575 ಹೊರಹರಿವು ದಾಖಲಾಗಿದೆ.

ಹಿಂದಿನ ಲೇಖನಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಶೇ.50 ರಷ್ಟು ಶಾಸಕರು
ಮುಂದಿನ ಲೇಖನಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮಕ್ಕಳ ಎದುರಿನಲ್ಲೇ ಪತ್ನಿಯ ಹತ್ಯೆಗೈದ ಪತಿ