ಮನೆ ಸುದ್ದಿ ಜಾಲ ಗುಂಡ್ಲುಪೇಟೆ: ಬೋನಿಗೆ ಬಿದ್ದ ಗಂಡು ಚಿರತೆ

ಗುಂಡ್ಲುಪೇಟೆ: ಬೋನಿಗೆ ಬಿದ್ದ ಗಂಡು ಚಿರತೆ

0

ಗುಂಡ್ಲುಪೇಟೆ (ಚಾಮರಾಜನಗರ): ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 5-6 ವರ್ಷದ ಗಂಡು ಚಿರತೆಯೊಂದು ಸೆರೆಯಾಗಿರುವ ಘಟನೆ ತಾಲೂಕಿನ ಪಡಗೂರು ಗ್ರಾಮದಲ್ಲಿ ಹೊರ ವಲಯದಲ್ಲಿ ಸೆ.24ರ ಮಂಗಳವಾರ ನಡೆದಿದೆ.

Join Our Whatsapp Group

ತಾಲೂಕಿನ ಪಡುಗೂರು ಗ್ರಾಮದ ಶಿವಕುಮಾರ್ ಎಂಬವರ ಜಮೀನಿನಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ 3-4 ದಿನಗಳ ಹಿಂದೆ ಜಮೀನಿನಲ್ಲಿ ಹುಲಿ‌ ಕಾಣಿಸಿಕೊಂಡ ಹಿನ್ನೆಲೆ ರೈತರ ಒತ್ತಾಯದ ಮೇರೆಗೆ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳು ಬೋನ್ ಇರಿಸಿದ್ದರು. ಇದೀಗ ಆ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ರೈತ ಸೆ.24ರ ಮಂಗಳವಾರ ಬೆಳಿಗ್ಗೆ ಜಮೀನಿಗೆ ಹೋಗಿದ್ದ ವೇಳೆ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು ಗಮನಕ್ಕೆ ಬಂದಿದೆ. ಮಾಹಿತಿ ಅರಿತ ಆರ್.ಎಫ್.ಓ. ಸತೀಶ್ ಕುಮಾರ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಟ್ಟುಸಿರು ಬಿಟ್ಟ ರೈತರು: ಪಡಗೂರು, ಪರಮಾಪುರ ವ್ಯಾಪ್ತಿಯಲ್ಲಿ ಹುಲಿ ಹಾಗೂ ಚಿರತೆ ಹಾವಳಿ ಹೆಚ್ಚಿನ ರೀತಿಯಲ್ಲಿದ್ದು, ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ನಡೆಸಿ ತಿಂದು ಕೊಂದು ಹಾಕುತ್ತಿದ್ದವು. ಇದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದೀಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಕಾರಣ ರೈತರು ನಿಟ್ಟುಸಿರು ಬಿಡುವಂತಾಗಿದೆ.