ನ್ಯೂಯಾರ್ಕ್ : ಬ್ರಾಂಕ್ಸ್ ಬರೋದಲ್ಲಿನ ಸುರಂಗಮಾರ್ಗದಲ್ಲಿ ಬಂದೂಕುಧಾರಿಯೊರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು ಇತರ ಐದು ಮಂದಿ ಗಾಯಗೊಂಡಿರುವ ವರದಿಯಾಗಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಪುರುಷರು ಮಹಿಳೆಯರು ಸೇರಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಯಿಸಲಾಗಿದ್ದು ಅದರಲ್ಲಿ 25 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಘಟನೆ ನಡೆಯಲು ಕಾರಣ ತಿಳಿದುಬಂದಿಲ್ಲ ಪೊಲೀಸರ ಮಾಹಿತಿ ಪ್ರಕಾರ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.














