ಮನೆ ಸ್ಥಳೀಯ ಮೈಸೂರು: ಮದ್ಯ ಮಾರಾಟ ನಿಷೇಧ

ಮೈಸೂರು: ಮದ್ಯ ಮಾರಾಟ ನಿಷೇಧ

0

ಮೈಸೂರು: ಕರ್ನಾಟಕ ವಿಧಾನ ಪರಿಷತ್ತಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಮತ್ತು ಮತ ಎಣಿಕೆಯ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಜೂ.03 ರಂದು ಮತದಾನ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಜೂ.01 ರ ಸಂಜೆ 4 ಗಂಟೆಯಿoದ ಜೂ.03 ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಮತ ಎಣಿಕೆ ಕಾರ್ಯವು ಜೂ.06 ರಂದು ನಡೆಯಲಿರುವುದರಿಂದ ನಗರ ಮತ್ತು ನಗರ ವ್ಯಾಪ್ತಿಯಿಂದ 05 ಕಿ.ಮೀ ವ್ಯಾಪ್ತಿಯವರೆಗೆ ಜೂ.05 ರಂದು ಮಧ್ಯರಾತ್ರಿ 12 ಗಂಟೆಯಿoದ ಜೂ.06 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ.

Join Our Whatsapp Group

ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮಾಲೀಕರು, ಅಧಿಭೋಗದಾರರು ಮತ್ತು ವ್ಯವಸ್ಥಾಪಕರು ಅಂಗಡಿ ಮುಚ್ಚಲು ಹಾಗೂ ಮೊಹರು ಮಾಡಿ ಅದರ ಕೀಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಡಾ. ಕೆ.ವಿ. ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಮೈಸೂರು: ಕಂಟ್ರೋಲ್ ರೂಂಗಳ ಸ್ಥಾಪನೆ
ಮುಂದಿನ ಲೇಖನರಾಮನಗರ: ಪತ್ನಿಯನ್ನೇ ಹತ್ಯೆಗೈದು ಪರಾರಿಯಾದ ಪತಿ