ಮನೆ ರಾಜ್ಯ ಹಡಪದ ಅಪ್ಪಣ್ಣ ಅವರ ವಚನಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿ.ಟಿ.ದೇವೇಗೌಡ

ಹಡಪದ ಅಪ್ಪಣ್ಣ ಅವರ ವಚನಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿ.ಟಿ.ದೇವೇಗೌಡ

0

ಮೈಸೂರು(Mysuru): ಹಡಪದ ಅಪ್ಪಣ್ಣ ಅವರ ವಿಚಾರದಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ತಿಳಿಸಿದರು.
ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಡಪದ ಅಪ್ಪಣ್ಣ ಜಯಂತಿ ಸಮಿತಿ ಸಹಯೋಗದೊಂದಿಗೆ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಪ್ಪಣ್ಣ ಅವರು ವಚನಗಳು ಬಸವಣ್ಣನವರ ಮೇಲಿನ ಗೌರವ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಪ್ಪಣ್ಣನವರನ್ನು ನಿಜಸುಖಿ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
 ಅಪ್ಪಣ್ಣನವರು ಲಿಂಗವನ್ನು ಕೈಯಲ್ಲಿ ಇಟ್ಟುಕೊಂಡು ಲಿಂಗವನ್ನು ನೋಡಿ ಅದರಲ್ಲಿಯೇ ತಲ್ಲೀನರಾಗುತ್ತಿದ್ದರು. 12ನೇ ಶತಮಾನದಲ್ಲಿಯೇ ಹಾಸ್ಯ ವಚನಕಾರರಾಗಿ ಪ್ರಮುಖವಾದ ವಚನಗಳ ಮುಖಾಂತರ ಮಾತ್ರ ಬದಲಾವಣೆಗೆ ಮುನ್ನುಡಿ ಬರೆದ ಮಹಾವೀರರು ಇವರು ಎಂದು ಹೇಳಿದರು.
ಮೈಸೂರಿನ ಶರಣು ವಿಶ್ವ ವಚನ ಫೌಂಡೇಶನ್‌ನ ಡಾ.ವಚನ ಕುಮಾರಸ್ವಾಮಿ ಅವರು ಮಾತನಾಡಿ ಒಂದು ಗ್ರಾಮದಲ್ಲಿರುವ ಜನರು ಒಗ್ಗಟ್ಟಿನಲ್ಲಿ ಇದ್ದರೆ ಅದೇ ಸ್ವರ್ಗ. ಅಪ್ಪಣ್ಣ ಅವರ ಮೂಲ ಹೆಸರು ಜೀವಣ್ಣ. ಇವರ ಜನ್ಮಸ್ಥಳ ವಾಸಬಿನಾಳ. ಇವರು ಅವರ ಜಮೀನಿನಲ್ಲಿಯೇ ಇದ್ದಂತಹ ಒಂದು ಜಂಬೆ ಮರದ ಕೆಳಗೆ ಶಿವ ಭಕ್ತಿಯಲ್ಲಿ ತಲ್ಲಿನರಾಗಿರುತ್ತಿದ್ದರು. ಇದರಿಂದ ಭಯಗೊಂಡ ಅವರ ತಂದೆ ಅವರಿಗೆ ವಿವಾಹವನ್ನು ಮಾಡಿದರು. ಬಾಲ್ಯದಲ್ಲಿಯೇ ಹಡಪದ ಅಪ್ಪಣ್ಣ ಅವರಿಗೆ ವಿವಾಹವಾಗಿ ಗಂಡ-ಹೆAಡತಿ ಇಬ್ಬರಿಗೂ ಕೂಡ ಶಿವದೀಕ್ಷೆ ಆಗುತ್ತದೆ ಎಂದು ತಿಳಿಸಿದರು.
 ಹಡಪದ ಅಪ್ಪಣ್ಣ ರವರು ಅವರ ತನು-ಮನ ಎಲ್ಲವನ್ನೂ ಕೂಡ ಬಸವಣ್ಣನವರಿಗೆ ಅರ್ಪಣೆ ಮಾಡುತ್ತಾರೆ ನಂತರ ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಳ್ಳುತ್ತಾರೆ. ಹಡಪದ ಅಪ್ಪಣ್ಣನವರ 354 ವಚನಗಳು ದೊರೆತಿವೆ. ಹಡಪದ ಅಪ್ಪಣ್ಣ ಬೇರೆಯಲ್ಲ ಸಂಗಮೇಶ್ವರ ಅಪ್ಪಣ್ಣ ಬೇರೆಯಲ್ಲ ಇಬ್ಬರೂ ಒಂದೇ ಎಂದು ಸ್ಪಷ್ಟಪಡಿಸಿದರು.