ಮನೆ ಮನರಂಜನೆ ಸದ್ದಿಲ್ಲದೆ‌ ನಡೆಯುತ್ತಿದೆ ನಟ ಮನೋರಂಜನ್ ಮದುವೆ ಸಿದ್ಧತೆ: ಆಮಂತ್ರಣ ಪತ್ರಿಕೆ ಸೋರಿಕೆ

ಸದ್ದಿಲ್ಲದೆ‌ ನಡೆಯುತ್ತಿದೆ ನಟ ಮನೋರಂಜನ್ ಮದುವೆ ಸಿದ್ಧತೆ: ಆಮಂತ್ರಣ ಪತ್ರಿಕೆ ಸೋರಿಕೆ

0

ಬೆಂಗಳೂರು (Bengaluru): ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಸಿದ್ಧತೆ ಸದ್ದಿಲ್ಲದೆ ಜೋರಾಗಿ ನಡೆಯುತ್ತಿದೆ.
ಮನೋರಂಜನ್‌ಗೆ ಮದುವೆ ನಿಗದಿಯಾಗಿದ್ದು, ಸಕಲ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕುಟುಂಬ ಅಧಿಕೃತವಾಗಿ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಮದುವೆ ಮದುವೆ ಆಮಂತ್ರಣ ಪ್ರತ್ರಿಕೆಯ ಸೋರಿಕೆ ಆಗಿದೆ. ಆದರೆ ಈ ವೈರಲ್ ಪತ್ರಿಕೆ ಫೊಟೋ ಬಗ್ಗೆಯೂ ಯಾವುದೇ ರೀತಿಯ ಸ್ಪಷ್ಟನೆ ಕ್ರೇಜಿ ಕುಟುಂಬದಿಂದ ಬಂದಿಲ್ಲ.
ಈ ಹಿಂದೆ ಮಗಳ ಮದುವೆ ಪತ್ರಿಕೆಯನ್ನೂ ಕೂಡ ಅತ್ಯಂತ ವಿಶೇಷವಾಗಿ ಮಾಡಿಸಿದ್ದರು. ಈಗ ಮಗನ ಮದುವೆ ಪತ್ರಿಕೆ ಕೂಡ ಅಷ್ಟೇ ವಿಶೇಷವಾಗಿದೆ.
ಮದುವೆ ಆಮಂತ್ರಣ ಪತ್ರಿಕೆ‌ ಸೋರಿಕೆಯಾಗಿರುವುದರಿಂದ ಮನೋಜ್ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಬಹಿರಂಗಗೊಂಡಿದೆ. ಹುಡುಗಿಯ ಹೆಸರು ಸಂಗೀತಾ ದೀಪಕ್.
ಸಂಗೀತಾ ಬೆಂಗಳೂರಿನವರೇ ಅಂತೆ. ವಿಲ್ಸನ್ ಗಾರ್ಡನ್ ನಿವಾಸಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮಾತ್ರವೇ ತಿಳಿದು ಬಂದಿದೆ.
ವೈರಲ್ ಆಗಿರುವ ಈ ಮದುವೆ ಪತ್ರಿಕೆ ಹಲವು ವಿಶೇಷತೆಗಳಿಂದ ಕೂಡಿದೆ. ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮಿಂಚಿದ್ದಾರೆ. ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ. ಕ್ರೇಜಿಸ್ಟಾರ್ ವಿಭಿನ್ನ ಫೋಟೋವನ್ನು ಇಲ್ಲಿ ಕೆತ್ತಲಾಗಿದೆ. ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮದುಮಗ-ಮದುಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ. ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮನೋರಂಜನ್ ಮದುವೆ ನಡೆಯಲಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಇನ್ನೂ ಈಗಾಗಲೇ ಮದುವೆ ಪತ್ರಿಕೆಯನ್ನು ಗಣ್ಯರಿಗೆ ತಲುಪಿಸುವ ಕಾರ್ಯ ಕೂಡ ಶುರುವಾಗಿದೆ ಎನ್ನಲಾಗುತ್ತಿದೆ.

ಹಿಂದಿನ ಲೇಖನಹಡಪದ ಅಪ್ಪಣ್ಣ ಅವರ ವಚನಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿ.ಟಿ.ದೇವೇಗೌಡ
ಮುಂದಿನ ಲೇಖನಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ: ಮಗಳು-ಅಳಿಯನನ್ನು ಕೊಂದ ತಂದೆ