ಮನೆ ದೇವಸ್ಥಾನ ಹರಕೆ ಹನುಮ ದೇವಾಲಯ

ಹರಕೆ ಹನುಮ ದೇವಾಲಯ

0

     ದೇವಾಲಯದ  ಹಿನ್ನೆಲೆ ಈ ಐಟಿಐ ಬಡಾವಣೆಯು ಐಟಿಐ ಸೊಸೈಟಿ ಯಿಂದ ನಿರ್ಮಾಣಗೊಂಡಿದ್ದು ನೌಕರವರ್ಗದ ಶ್ರೇಯೋಭಿವೃದ್ಧಿಗಾಗಿ ವಸತಿಗಳನ್ನು .ನಿರ್ಮಾಣ ಮಾಡಲಾಯಿತು. ತಮ್ಮ ಸ್ವಂತ ಮನೆಗಳಲ್ಲಿ ವಾಸ ಮಾಡಲು ಇಲ್ಲಿಗೆ ಬಂದ ಕೆಲವರು ತಮ್ಮ ಬಡಾವಣೆಯಲ್ಲಿ ಒಂದು ದೇವಾಲಯವಿರಬೇಕೆಂದು ನಿರ್ಧರಿಸಿದರು.

Join Our Whatsapp Group

     1982 ರಲ್ಲಿ ಬಾಲಹನುಮನ ವಿಗ್ರಹ ಸ್ಥಾಪನೆಯೊಂದಿಗೆ ಇಲ್ಲಿನ ನಿವಾಸಿಗಳಿಂದ ದೇವಾಲಯದ ನಿರ್ಮಾಣದ ಕಾರ್ಯ ಶುಭಾರಂಭಗೊಂಡಿತು.ರಾತ್ರಿ ಮಂಗಳಮಯನಾದ ಪುಟ್ಟ ಹನುಮ ಭಕ್ತರ ಹರಕೆಯನ್ನು ಈಡೇರಿಸುತ್ತ ಅವರ ಅಭಿಷೇಕಗಳನ್ನು  ಪೂರೈಸುತ್ತಾ ಬಹಳ ಬೇಗ ಭಕ್ತರ ಆರಾಧ್ಯ ದೈವನಾದವಾದ್ದರಿಂದ ಹರಕೆ ಅನುಮ ಎಂದೇ  ನಾಮಕರಣ ಮಾಡಲಾಗಿತು ಈ ಬಡಾವಣೆ  ಶ್ರೀ ಪೇಚಾವರ ಮಠದ ಪೂರ್ಣಪ್ರಜ್ಞಾ ವಿದ್ಯಾಪೀಠದ ಬದಿಗಿರುವ ಒಂದು ಗುಡ್ಡ ಪ್ರದೇಶವಾಗಿತ್ತು.

     ಐಟಿಐ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮನೆಯನ್ನು ಕಟ್ಟಲಾರಂಭಿಸಿದರು.ದೂರದ ಗುಡ್ಡದ ಮೇಲೆ ಬಹಳ ದೊಡ್ಡ ಕಲ್ಲಿನ ಹಳ್ಳವಿತ್ತು..ಈ ಗುಡ್ಡದಲ್ಲಿ ಒಂದು ಗುಡಿಯನ್ನು ಸ್ಥಾಪಿಸಲು ಸರಿಯಾದ ಜಾಗವೆಂದು ನಿಶ್ಚಯಿಸಿದರು ಹೊಸಕೆರೆಹಳ್ಳಿ ಶ್ರೀದತ್ತಪೀಠದ ಗುರುಗಳಾಗಿದ್ದ ಶ್ರೀ ನಾರಾಯಣರಾವ್ ಅವರಿಗೆ ಸೇರಿದ ಜಾಗವೆಂದು ಇಳಿಯಿತು.

      ಈ ದತ್ತಪೀಠದ ಗುರುಗಳಾಗಿ ಪ್ರಸಿದ್ಧರಾಗಿದ್ದ ನಾರಾಯಣ ರಾಯರನ್ನು ಈ ಜಾಗದಲ್ಲಿ ದೇವಸ್ಥಾನವನ್ನು ಕಟ್ಟಿಕೊಳ್ಳಲು ಬಿಟ್ಟುಕೊಡಬೇಕೆಂದು ನಿವಾಸಿಗಳು ನಿವೇದನೆ ಮಾಡಿಕೊಂಡರು ಒಂದು ದೈವ ಸನ್ನಿಧಿ ರೂಪುಗೊಳ್ಳುತ್ತದೆ, ಸತ್ಕಾರಗಳು ನೆಲದಲ್ಲಿ ನಡೆಯುತ್ತವೆ ಎಂದು ಅಲ್ಲಿ ಗುಡಿಯ ನಿರ್ಮಾಣಕ್ಕೆ ಜಾಗವನ್ನು ಬಿಟ್ಟು ಕೊಟ್ಟರು .

    ಇದು ಹರಕೆ ಹನುಮನ ದೇವಾಲಯ ರೂಪುಗೊಳ್ಳಲು ಒಂದು ಕಾರಣವಾಯಿತು. ಐಟಿಐ ಬಡಾವಣೆಯಲ್ಲಿ ಆಗ ಇದ್ದ ಕುಟುಂಬಗಳ ಸಂಖ್ಯೆಯು ಕಡಿಮೆ, ಬೆಳಗಿನಿಂದ ಸಂಜೆವರೆಗೂ ದುಡಿದು ತಿಂಗಳ ಸಂಬಳದಲ್ಲಿ ಮನೆಯಲ್ಲ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಮಾಧ್ಯಮ ವರ್ಗದ ಕುಟುಂಬಗಳು.ದೊಡ್ಡ ಗುಡಿಯನ್ನು ಕಟ್ಟಲು ಇದ್ದ ಆರ್ಥಿಕ ಸೌಲಭ್ಯಗಳು ಕಡಿಮೆ. ಗುಡ್ಡದಮೇಲೆ ಒಂದು ಸಣ್ಣ ಗೂಡು ಕಟ್ಟಿ ಸರ್ವ ಭಯ ನಿವಾರಕ ಶನಿ ಮಹಾತ್ಮನಿಂದಲೂ ಗೌರವಿಸಲ್ಪಡುವ ಮಾರುತಿಯ ಪುಟ್ಟ ಒಂದು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಹಿರಿಯರು ನಿರ್ಧರಿಸಿದರು.

     ಗುಡ್ಡ ಬಹಳ ಹಳ್ಳಕೊಳ್ಳ ಕಲ್ಲು ಮುಳ್ಳು,ಗಿಡಗಂಟೆಗಳಿಂದ ಕೂಡಿತ್ತು. ಅವೆಲ್ಲವನ್ನೂ ತೆಗೆಸಿ ಸಮತಟ್ಟ ಮಾಡಲು ಕೆಲಸದ ಅಳುಗಳನ್ನು ಕರೆಯಬೇಕೆಂದರೆ ಖರ್ಚು ಜಾಸ್ತಿಯಾಗುತ್ತದೆ ಗುಡಿಯನ್ನು ಕಟ್ಟಲೇಬೇಕೆಂದು  ನಿರ್ಧರಿಸಿದ್ದ ಬಡಾವಣೆಯ ಕುಟುಂಬದವರೆಲ್ಲರೂ ತಾವೇ ಆ ಕೆಲಸಕ್ಕೆ ಕೈ ಹಾಕಿದರು.

    ಫ್ಯಾಕ್ಟರಿಯ ಕೆಲಸ ಮುಗಿಸಿ ಬಂದ ಮೇಲೆ ಸಂಜೆಯಿಂದ ರಾತ್ರಿ ಸುಮಾರು  ಹೊತ್ತಿನವರೆಗೂ  ಹೆಂಗಸರು ಬಾಣಲೆಯಲ್ಲಿ ಅವುಗಳನ್ನು ತುಂಬಿಕೊಂಡರೆ ಗಂಡಸರು ತೆಗೆದುಕೊಂಡು ಹೋಗಿ ಹಳ್ಳಕಳ್ಳವನ್ನು  ಮುಚ್ಚುತ್ತಿದ್ದರು. ಕತ್ತಲೆಯಾಗುತ್ತಿದ್ದುದರಿಂದ ಗುಡ್ಡದ ಬಳಿಯೇ ಇದ್ದ ಶ್ರೀ ಡಿ ಸತ್ಯನಾರಾಯಣರಾವ್ ಅವರ ಮನೆಯಿಂದ ಹೊರಗೆ ದೀಪ ಹಾಕಿಕೊಳ್ಳಲಾಗಿತ್ತು.ಯಾರಿಗೂ ಆಯಾಸವೆಂಬುದಿಲ್ಲ. ದೇವರ ಕಾರ್ಯವೆಂಬ ಉತ್ಸಾಹ. ಮತ್ತು ಬಡಾವಣೆಯಲ್ಲಿ ತಾವೇ ಗುಡಿಯನ್ನು ಕಟ್ಟುತ್ತಿದ್ದೇವೆಂಬ ಧನ್ಯತಾ ಬಾವ,ಗುಡ್ಡದ ಮೇಲೆ ಒಂದು ಚಿಕ್ಕ ಗೂಡಿನಂತಹ ರಚನೆಯನ್ನು ನಿರ್ಮಿಸಲು ಮತ್ತು ಅದರ ಮುಂದೆ ಸ್ವಲ್ಪ ಜಾಗ ಇಲ್ಲ ಇವೆಲ್ಲವೂ ಸಮತಟ್ಟಾಯಿತು.

    ಚಿಕ್ಕ ಗೂಡಿನಲ್ಲಿ ಸುಂದರನಾದ ಸುಮಾರು ಒಂದುವರೆ ಅಡಿ ಎತ್ತರದ ಪುಟ್ಟ ಬಾಲ ಹನುಮನನ್ನು ಮಗುವಿನಂತೆ ಕರೆ ತಂದವರು ಶ್ರೀಮತಿ ಸುಮಿತ್ರ ಮತ್ತು ಶ್ರೀ ಡಿಸಿ ಕೃಷ್ಣಮೂರ್ತಿ ದಂಪತಿಗಳು.ದೇವಸ್ಥಾನ ನಿರ್ಮಾಣಕ್ಕಾಗಿ ಓಡಾಡುತ್ತಿದ್ದವರಲ್ಲಿ ಮುಖ್ಯಸ್ಥರಾದ ಶ್ರೀಪಿಎಸ್ ಸೂರ್ಯನಾರಾಯಣ ಮೂರ್ತಿ, ಶ್ರೀಸಿ ಕೆ ಸಿ ಸುಬ್ಬರಾಮರಾವ್ ಮತ್ತು ಶ್ರೀ ಡಿ ಸಿ ಕೆ ಇವರುಗಳು ತಮ್ಮ ಸಣ್ಣ ಗುಡಿಗೆ ಅನುರೂಪವಾದ ಹನುಮಂತನ ಮೂರ್ತಿಯನ್ನು ಮಾಡಿಸಲು ಓಡಾಡುತ್ತಿದ್ದಾಗ ಶಿವಾಜಿ ಥಿಯೇಟರ್ ಬಳಿ ಒಬ್ಬ ಶಿಲ್ಪಿಯ ಬಳಿ ಪುಟ್ಟ ಆಂಜನೇಯನ ಮೂರ್ತಿ ಇದ್ದದ್ದನ್ನು ನೋಡಿದರು.ಆತನನ್ನು ಈ ರೀತಿಯ ಮೂರ್ತಿ ಮಾಡಿಕೊಡಲು ಸಾಧ್ಯವೇ ಎಂದು ವಿಚಾರಿಸಿದರು ಆತ ಇದನ್ನೇ ತೆಗೆದುಕೊಂಡು ಹೋಗಬಹುದೆಂದು   ತಿಳಿಸಿದರು.

     ಒಳ್ಳೆಯ ದಿನವನ್ನು ನೋಡಿ 150 ರೂಗಳನ್ನು ಪಾವತಿ ಮಾಡಿದ ಮೇಲೆ ಅಂಗಡಿಯಾತ ಶ್ರೀಮತಿ ಸುಮಿತ್ರ ಅವರು ಆಟೋದಲ್ಲಿ  ಕೂರಲು ಹೇಳಿ ನಂತರ ಅವರ ಕೈಗಳಿಗೆ ಈ ಹನುಮನನ್ನು ಒಂದು ಸಣ್ಣ ಮಗುವನ್ನು ಕೊಡುವ ರೀತಿಯಲ್ಲಿ ನೀಡಿದರು.

   ಬಹಳಷ್ಟು ಅದೇ ಪ್ರೀತಿ ಮತ್ತು ಭಕ್ತಿಯೊಂದಿಗೆ ಮೂರು ತಿಂಗಳ ಕಾಲ ಸೂಕ್ತ ರೀತಿಯಲ್ಲಿ ನೆರವೇರಿಸಬೇಕಾದ ಜಲವಾಸ.ನಂತರ ಪ್ರತಿಷ್ಠಾಪನೆಗೆ ಮುಂಚೆ ಧನ್ಯವಾಸ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಶ್ರೀ ಡಿ ಸತ್ಯನಾರಾಯಣರಾವ್ ಮನೆಯಲ್ಲಿ ಇರಿಸಿ  ಸರಿಸಲಾಯಿತು.

      1982 ಮಾರ್ಚ್ 5 ಮತ್ತು 6 ರಂದು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ನಡೆದ ನಂತರ 7ರಂದು ಹಾರಕೆ ಹನುಮನ ಪ್ರತಿಷ್ಠಾಪನೆ ಮಾಡಲಾಯಿತು. ಬಲರಾಮ ಶಾಸ್ತ್ರಿಗಳ ನೇತೃತ್ವದಲ್ಲಿ ಸಣ್ಣ ಗೂಡಿನೊಳಗೆ ಹುಟ್ಟ ಹನುಮನ ಪ್ರತಿಷ್ಠಾಪನೆ ಆಯಿತು ಗುಡಿ ಮತ್ತು ಮೂರ್ತಿ ಚಿಕ್ಕದಾದರೂ ಕಾರ್ಯಕ್ರಮದ ಸ್ವರೂಪ ದೊಡ್ಡದಾಗೇ ಇತ್ತು. ಬಡಾವಣೆಯ ಹೊತ್ತು ಅಕ್ಕಪಕ್ಕದ ಪ್ರದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಷ್ಠಾಪನೆಯ ಕಾರ್ಯದಲ್ಲಿ ಪಾಲ್ಗೊಂಡರು.

     ಗುಡಿಯು  ಗೂಡಿನಂತೆ ಇತ್ತು ಒಳಗೆ ಒಬ್ಬರು ಮಾತ್ರ ಹೋಗಬಹುದಿತ್ತು.ಹೀಗಾಗಿ ಸ್ವಲ್ಪ ದೊಡ್ಡ ಗುಡಿಯ ನಿರ್ಮಾಣ ಮಾಡಲು ನೂತನ ಗುಡಿಯ ಪ್ರತಿಷ್ಠಾಪನ ಮಹೋತ್ಸವ ಮಹೋತ್ಸವ 23 10 1985, ಎಧ ಬುಧವಾರ ವಿಜಯದಶಮಿ ಎಂದು ನಡೆಯಿತು

     ಪುಟ್ಟ ದೇವಸ್ಥಾನಕ್ಕೆ ಕಟ್ಟಿದ್ದ ತಡೆಗೋಡೆಗೆ ಗೇಟ್ ಇಟ್ಟುಕೊಡಲು ಬಂದ ದಾಮೋದರ್ ಅವರಿಗೆ ಹರಕೆ ನಮ್ಮ ಒಂದು ದೊಡ್ಡ ಪ್ರಮಾಣದ ಸುಂದರವಾದ ದೇವಾಲಯವನ್ನು ನಿರ್ಮಿಸುವಂತೆ ಪ್ರೇರಣೆಯಾಯಿತು ಈ ಹಾಗಣಪತಿಯ ಶ್ರೀ ಹರಕೆ ಹನುಮನ ದೊಡ್ಡ ಮೂರ್ತಿ,  ಯಯ್ಶನವಗ್ರಹ,ನಾಗ ಸಮೇತ ಪ್ರತಿಷ್ಠಾಪನಾ ಮಹೋತ್ಸವ 23 10 2008 ಆಗ ಸೆಂಟರ್8,ರ ಶುಕ್ರವಾರದಿಂದ ಮೂರು ದಿನಗಳ ಕಾಲ ವೈಭವದಿಂದ ನಡೆಯಿತು.

         ಯಾವುದೇ ಒಂದು ದೇವಾಲಯ ಗೋಪುರವನ್ನು ಹೊಂದಿದಾಗ ಮಾತ್ರ ಅದು ಪೂರ್ಣ ಸ್ವರೂಪವನ್ನು ಪಡೆಯುತ್ತದೆ ಸುಂದರವಾಗಿ ರೂಪಗೊಂಡಿದ್ದ ಹರಕೆ ಹನುಮಾ ದೇವಸ್ಥಾನಕ್ಕೆ ಖ್ಯಾತ ಗೋಪುರ ಶಿಲ್ಪ ಶ್ರೀ ಸ್ವಾಮಿನಾಥನ್ ಅವರು ಗೋಪುರವನ್ನು ನಿರ್ಮಿಸಿ ಪೂರ್ಣ ಸ್ವರೂಪವನ್ನು ನೀಡಿದರು 2017 ಮಾರ್ಚ್ ಮೂರರ ಬುಧವಾರದಂದು ಮಹಾಕುಂಭಾಭಿಷೇಕವು ಬಹಳ ಕ್ರಮಬದ್ಧವಾಗಿ ನಡೆಯಿತು.

     ವಿಳಂಬ ನಾಮ ಸಂವತ್ಸರದ ಶ್ರಾವಣ ಶುಕ್ರ ಪಕ್ಷದ ನವಮಿ ದಿನಾಂಕ 19 -8– 2018 ರಂದು ನೂತನ ದೇವಾಲಯ ಹತ್ತನೇ  ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು, ಶ್ರೀ ಸುರೇಶ್ ಮೂನ ಬರೆದ ಮಹಾಮಹಿಮ ಹಾರಕೆ ಹನುಮ ಕೃತಿ ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ  ಪದಾರ್ಥ ಸಾರಥಿ ಅವರ ಅಮೃತ ಹಸ್ತದಿಂದ ಲೋಕಾರ್ಪಣೆ ಆಯ್ತು. ಅನೇಕ ಭಕ್ತರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕಷ್ಟ ನಷ್ಟಗಳ ಸಂದರ್ಭದಲ್ಲಿ ಹನುಮ ಅವರ ಬಾಳಿನ ದಾರಿದೀಪವಾಗಿ ಹೇಗೆ ಕೃಪೆ ಹರಸಿದ.ಇದರಿಂದಾಗಿ ಶಾಂತಿ, ನೆಮ್ಮದಿ ಹಾಗೂ ಆನಂದ ದೊರಕಿತು ಎಂಬುದನ್ನು ವಿವರಿಸಿದ್ದಾರೆ.

     ಹರಕೆ ಹನುಮನ ದೇವಸ್ಥಾನದ ಪ್ರಾರಂಭದಿಂದಲೂ ರಾಮನವಮಿ,ಹನುಮ ಜಯಂತಿ ಸಾಂಗವಾಗಿ ನಡೆದು ಕೊಂಡು ಬಂದಿದೆ. ಸತ್ಯನಾರಾಯಣ ಪೂಜೆ, ಸಂಕಷ್ಟಹರ ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಪಾವ ಮಾವ ಅಭಿಷೇಕ,ಅಲಂಕಾರ ಸೇವೆ,ಪ್ರಸಾದ ಸೇವೆ ಸರ್ವ ಸೇವೆ, ಗಣ ಹೋಮ, ನವಗ್ರಹ ಹೋಮ, ಉತ್ಸವ ಸೇವೆ, ಶ್ರೀರಾಮ ಜಯ ರಾಮ ಜಯ ಜಯ ರಾಮ ಮಂತ್ರವನ್ನು ಜಪಿಸುತ್ತಾ ಶ್ರೀ ಸೀತಾ  ರಾಮಚಂದ್ರ ದೇವರಿಗೆ ಪ್ರದಕ್ಷಿಣೆ ಮಾಡುವ ಈ ರಾಮತಾರಕ ಮಂತ್ರ ಜಪ ಯಜ್ಞ, ಅಖಂಡ ಭಜನೆ, ವಿಷ್ಣು ಸಹಸ್ರನಾಮ, ಗೀತಾ ಜಯಂತಿ ತ್ಯಾಗರಾಜ ಆರಾಧನೆ, ಪ್ರಾಕಾರೋತ್ಸವದಂತಹ ಧಾರ್ಮಿಕ ಕಾರ್ಯಗಳಲ್ಲದೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ಬಹಳ ಚುರುಕಟ್ಟಾಗಿ ನಡೆಯುತ್ತದೆ.

       ಭಕ್ತರ ಆರೈಕೆ ಫಲಿಸಿದ ನಂತರ ದೇವರಿಗೆ ಹಲವಾರು ಸೇವೆಗಳನ್ನು ಮಾಡುತ್ತಾರೆ.ಭಕ್ತನ ಬಯಕೆ ಮೂರ್ತಿಗೆ ವಿವಿಧ ರೀತಿಯ ಹಾರಗಳನ್ನು ತೊಡಿಸಿ ಅಲಂಕರಿಸುವುದು ಒಂದು ರೀತಿಯಾದರೆ, ವಸ್ತುವನ್ನೇ ಮೂರ್ತಿಗೆ ಲೇಪಿಸುವುದು ಇನ್ನೊಂದು ಕ್ರಮ.ಆಭರಣಗಳು, ವಡೆ,ಕರಿದ,ಕಡುಬು, ವೀಳ್ಯದೆಲೆ, ಹೂವು ,ತುಳಸಿ,ಇವೆಲ್ಲ ಸಾಮಾನ್ಯವಾಗಿ ಹಾರದ ಸೇವೆಗೆ ಬಳಸುವ ವಸ್ತುಗಳು.ಬೆಣ್ಣೆ, ಅರಿಷಿಣ, ಕುಂಕುಮ,ಸಿಂಧೂರ, ತರಕಾರಿಗಳು ಮೂರ್ತಿಯ ಅಲಂಕಾರಕ್ಕೆ ಬಳಸಲ್ಪಡುತ್ತದೆ.

     1997ರಲ್ಲಿ ಶ್ರೀರಾಮ ದೇವರಿಗೆ ರಜತ ಕಿರೀಟದ ಸಮೇತ ಪಟ್ಟಾಭಿಷೇಕ ಮಾಡಿದ್ದು ಒಂದು ವಿಶೇಷ ಸಂಗತಿ.