ಮನೆ ಮನರಂಜನೆ 25 ದಿನ ಪೂರೈಸಿದ ʻ777 ಚಾರ್ಲಿʼ

25 ದಿನ ಪೂರೈಸಿದ ʻ777 ಚಾರ್ಲಿʼ

0

ಬೆಂಗಳೂರು (Bengaluru): ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿ 25 ದಿನಗಳನ್ನು ಪೂರೈಸಿದೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದೂ ಆಗಿದೆ. ಇನ್ನೇನಿದ್ದರೂ ದಾಖಲೆಗಳನ್ನು ಬರೆಯುವುದಷ್ಟೇ ಬಾಕಿ ಇದೆ. ವೀಕೆಂಡ್‌ನಲ್ಲಿ ‘777 ಚಾರ್ಲಿ’ ಸಿನಿಮಾ ಕಲೆಕ್ಷನ್ ಸೂಪರ್‌ ಆಗಿದೆ. ʻ777 ಚಾರ್ಲಿ’ ಎಷ್ಟು ಕಲೆಕ್ಷನ್ ಮಾಡುತ್ತೆ ಎನ್ನುವುದೇ ದೊಡ್ಡ ಕುತೂಹಲವಾಗಿದೆ.

ಇನ್ನು ರಕ್ಷಿತ್‌ ಶೆಟ್ಟಿ ಅವರು ಅವನೇ ಶ್ರೀಮನ್ನಾರಾಯಣ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಸಿನಿಮಾ ಬಳಿಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

24ನೇ ದಿನ ಅಂದರೆ, ಜುಲೈ 3 ರಂದು ಚಾರ್ಲಿ ಕಲೆಕ್ಷನ್‌ನಲ್ಲಿ ಸುಮಾರು ಶೇ.42ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. 23ನೇ ದಿನ 1.26 ಕೋಟಿ ರೂ. ಗಳಿಸಿದ್ದರೆ, 24ನೇ ದಿನ ವಿಶ್ವದಾದ್ಯಂತ ಸುಮಾರು 1.80 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

25ನೇ ದಿನದಲ್ಲೂ ‘777 ಚಾರ್ಲಿ’ 100 ಕೋಟಿ ಗಳಿಕೆ ಮಾಡಲು ಸೋತಿದೆ. 25ನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ ಈ ಸಿನಿಮಾ ಕೇವಲ 97.50 ಕೋಟಿ ರೂ. ಗಳಿಸಲಷ್ಟೇ ಸಾಧ್ಯವಾಗಿದೆ ಎಂದು ಹೇಳಲಾಗಿದೆ.

ಹಿಂದಿನ ಲೇಖನಪಿಎಸ್‌ ಐ ನೇಮಕಾತಿ ಅಕ್ರಮ: ಬಂಧಿತ ಎಡಿಜಿಪಿ ಅಮೃತ್‌ ಪೌಲ್‌ 10 ದಿನ ಸಿಐಡಿ ವಶಕ್ಕೆ
ಮುಂದಿನ ಲೇಖನಲಂಚ ಪ್ರಕರಣ: ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ರನ್ನು ಬಂಧಿಸಿದ ಎಸಿಬಿ