ಮೈಸೂರು(Mysuru): “ವಿದ್ಯಾರ್ಥಿಗಳೆ ನಿಮ್ಮ ಬದುಕು ಸುಂದರವಾಗಬೇಕಾದರೆ ವಿದ್ಯೆಯ ಕೈಹಿಡಿಯಬೇಕು ತನ್ನ್ಮೂಲಕ ಯಶಸ್ಸು ಸಾಧಿಸಬೇಕು. ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗಗಳಿಲ್ಲ, ಇರುವುದೊಂದೆ ಪರಿಶ್ರಮ”. ಎಂದು ಮುಖ್ಯಶಿಕ್ಷಕರಾದ ರಮೇಶ್ ಕಿವಿಮಾತು ಹೇಳಿದರು.
ಮೈಸೂರು ಉತ್ತರವಲಯ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಗಿರಿಯಾ ಭೋವಿ ಪಾಳ್ಯದಲ್ಲಿ 2021-2022 ಸಾಲಿನ ಎಸ್,ಎಸ್,ಎಲ್, ಸಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ರಿತ್ಯಾ ಅಂಕಪಟ್ಟಿ ವಿತರಣೆಯನ್ನು ವಿನೂತನವಾಗಿ ನೆರವೇರಿಸಲಾಯಿತು.
ಹತ್ತನೇ ತರಗತಿ ಉಸ್ತುವಾರಿ ಶಿಕ್ಷಕಿ ಚೈತ್ರ ಅವರ ಕಲ್ಪನೆಯನ್ನು ಸಹೋದ್ಯೋಗಿಗಳ ಸಹಕಾರದಿಂದ ಹಾಗೂ ಗಿರಿಯಾಭೋವಿ ಪಾಳ್ಯದ ಶ್ರೀ ಶ್ರೀ ಸಿದ್ದರಾಮೇಶ್ವರ ಭೋವಿ ಸಮಾಜದ ಮುಖಂಡರುಗಳಾದ ಕೃಷ್ಣ, ನಾಗರಾಜು, ಗೋಪಾಲ ರವರು ದಾನದ ರೂಪದಲ್ಲಿ ನೀಡಿದ ಗೌನ್ ಮತ್ತು ಹ್ಯಾಟ್ ಧರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಮೈಸೂರು ಮಹಾನಗರಪಾಲಿಕೆಯ ಮಾಜಿ ಸದಸ್ಯ ನಾಗರಾಜು ಮಾತನಾಡಿ, “2021-2022 ನೇ ಸಾಲಿನಲ್ಲಿ ಉತ್ತರವಲಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೇ.ನೂರರಷ್ಟು ಎಸ್ಎಸ್ಎಲ್ ಸಿ ಫಲಿತಾಂಶ ದಾಖಲಿಸಿದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಗಿರಿಯಾ ಭೋವಿ ಪಾಳ್ಯದ ಸರ್ಕಾರಿ ಪ್ರೌಢಶಾಲೆಗೆ ಇದೆ” ಎಂದು ಅಭಿಮಾನದಿಂದ ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರನ್ನು ಹೋಗಳಿದರು.
ಮಾತ್ರವಲ್ಲದೇ ಶಾಲೆಗೆ ಬೇಕಾಗುವ ಸಹಾಯವನ್ನು ನಾವೆಲ್ಲರು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದಿನ ಸಾಲಿನ ವಿದ್ಯಾರ್ಥಿಗಳೊಂದಿಗೆ ಪೋಷಕರು, ಸಹ ಶಿಕ್ಷಕರಾದ ಜೈರಾಮ್, ಪ್ರಕಾಶ್, ಮೋನಿಕಾ ತಮ್ಮಜ್ಜಾ, ದಿವ್ಯಾ, ಧ್ರುವಜ್ಯೋತಿ, ಕಾವ್ಯ, ಚೈತ್ರ, ಭುವನೇಶ್ವರಿ ಪ್ರೇಮಾ, ಸಿಬ್ಬಂದಿಗಳಾದ ಸುವರ್ಣ, ಸುಕನ್ಯ ಉಪಸ್ಥಿತರಿದ್ದರು.