ಮನೆ ರಾಜಕೀಯ ಶಿವಮೊಗ್ಗ ಹತ್ಯೆ ಪ್ರಕರಣ; ನಾನು  ಪ್ರಚೋದನೆ ಹೇಳಿಕೆ ನೀಡಿದ್ದರೆ,  ನನ್ನನ್ನು ಬಂಧಿಸಲಿ: ಡಿಕೆಶಿ

ಶಿವಮೊಗ್ಗ ಹತ್ಯೆ ಪ್ರಕರಣ; ನಾನು  ಪ್ರಚೋದನೆ ಹೇಳಿಕೆ ನೀಡಿದ್ದರೆ,  ನನ್ನನ್ನು ಬಂಧಿಸಲಿ: ಡಿಕೆಶಿ

0

ಬೆಂಗಳೂರು: ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದು, ಕೆಲವರನ್ನು ಬಂಧಿಸಿದ್ದಾರೆ. 144 ಸೆಕ್ಷನ್ ಜಾರಿ ಮಾಡಿದ್ದಾರೆ. ನಾನು  ಪ್ರಚೋದನೆ ಹೇಳಿಕೆ ನೀಡಿದ್ದರೆ,  ನನ್ನನ್ನು ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದರು.

ಹರ್ಷ ಅಂತ್ಯಕ್ರಿಯೆ ಮೆರವಣಿಗೆ ಹೋಗುವ ವೇಳೆ ಕಲ್ಲು ತೂರಾಟ ನಡೆದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, 144 ಸೆಕ್ಷನ್ ಜಾರಿಯಲ್ಲಿದೆ, ಮಂತ್ರಿನೇ ಉಲ್ಲಂಘನೆ ಮಾಡಿದ್ದಾರೆ. ಒಬ್ಬ ಮಂತ್ರಿನೇ 144 ಉಲ್ಲಂಘನೆ ಮಾಡಿದರೂ ಯಾಕೆ ಕೇಸ್ ಹಾಕಿಲ್ಲ. ಒಬ್ಬ ಮಂತ್ರಿ ಹಾಗೆಲ್ಲ ಮಾಡಿದ ಮೇಲೆ ಯಾಕೆ ಬಿಟ್ಟಿದ್ದೀರಾ? ಅವರೇ ನಿಂತುಕೊಂಡು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿಕೊಂಡು ಕರೆದುಕೊಂಡು ಹೋದ್ರೂ ಕೇಸ್ ಯಾಕೆ ಹಾಕಿಲ್ಲ. ಈ ಬಗ್ಗೆ ಡಿಜಿ, ಎಸ್ ಪಿ ಹೇಳಬೇಕು. ಖಾಕಿ ಬಟ್ಟೆ ಹಾಕಿರುವವರು ಇದಕ್ಕೆ ಉತ್ತರಿಸಬೇಕು, ಇಲ್ಲ ಖಾಕಿ ಬಟ್ಟೆ ತೆಗೆದುಬಿಟ್ಟು ನೀವು ಕೇಸರಿ ಬಟ್ಟೆ ಹಾಕ್ಕೊಂಡು ಬಿಡಿ ಎಂದು ಗುಡುಗಿದ್ದಾರೆ.

ನಾನು ತಪ್ಪು ಮಾಡಿದ್ರೆ, ಕ್ರಮ ಕೈಗೊಳ್ಳಲಿ. ನಿನ್ನೆ ನೋಡಿ 144 ಸೆಕ್ಷನ್ ಇದ್ರು ಜನ ಕರ್ಕೊಂಡು ದೊಂಬಿ ಮಾಡಿದ್ದಾರೆ. ಇಡೀ ಶಿವಮೊಗ್ಗ ಜನರನ್ನ ಬದುಕಿರೋ ಹಾಗೇ ಸಾಯಿಸಿದ್ದಾರೆ. ಈ ರೀತಿ ಅದ್ರೆ ಯಾವ ಹೂಡಿಕೆದಾರರು ಹೋಗ್ತಾರೆ. ಪೊಲೀಸರು ಅದನ್ನ ತನಿಖೆ ಮಾಡಲಿ ಎಂದರು.

ಶಿವಮೊಗ್ಗ ಒಳ್ಳೆಯ ನಾಡು. ನಾನು ಕೂಡಾ ಯಡಿಯೂರಪ್ಪ ಜೊತೆ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜಕಾರಣಕ್ಕಾಗಿ ಈ ರೀತಿ ಗಲಾಟೆ ಮಾಡಿದ್ರೆ, ಯಾವ ಇನ್ವೆಸ್ಟರ್ ಹೋಗೊಲ್ಲ. ಸ್ಥಳೀಯರಲ್ಲ, ಹೊರಗಡೆಯಿಂದ ಬಂದು ಮಾಡಿದ್ದಾರೆ ಅಂತ ಹೇಳಿದ್ದಾರೆ. ಈಶ್ವರಪ್ಪ ಆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರನ್ನು ಬದುಕಿದ್ದ ಹಾಗೇ ಸಾಯಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.