ಮನೆ ಅಪರಾಧ ಹರ್ಷ ಹತ್ಯೆ ಪ್ರಕರಣ: 10 ನೇ ಆರೋಪಿಯ ಜಾಮೀನು ಅರ್ಜಿ ವಜಾ

ಹರ್ಷ ಹತ್ಯೆ ಪ್ರಕರಣ: 10 ನೇ ಆರೋಪಿಯ ಜಾಮೀನು ಅರ್ಜಿ ವಜಾ

0

ಬೆಂಗಳೂರು(Bengaluru): ಬಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ನೀಡಲು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ)  ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಜಾಮೀನು ಕೋರಿ ಶಿವಮೊಗ್ಗದ ವಾದಿ ಎ ಹುದಾ ನಗರದ ವಾಸಿಯಾದ ಜಾಫರ್‌ ಸಾದಿಕ್‌ ಬಿನ್‌ ಅಬ್ದುಲ್ ಸತ್ತಾರ್‌(50), ನನ್ನನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ನಿರಪರಾಧಿ ನನಗೆ ಜಾಮೀನು ನೀಡಬೇಕು’ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು ತಿರಸ್ಕರಿಸಿದ್ದಾರೆ.

ಈ ಅರ್ಜಿಗೆ ಅಕ್ಷೇಪಣೆ ಸಲ್ಲಿಸಿದ್ದ ಎನ್‌ಐಎ ಪರ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ಆರೋಪಿಯ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇರುವ ಕಾರಣ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ಪ್ರಾಸಿಕ್ಯೂಷನ್‌ ಆಕ್ಷೇಪಣೆಯನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ಆರೋಪಿಯು ಕೃತ್ಯದಲ್ಲಿ ಭಾಗಿಯಾಗಿ ರುವ ಬಗ್ಗೆ ಮೇಲ್ನೋಟಕ್ಕೇ ಸಾಕಷ್ಟು ಪುಷ್ಟಿ ನೀಡುವಂತಿದೆ. ಹತ್ಯೆಯಾಗಿರುವ ಹರ್ಷ, ಗೋರಕ್ಷಣೆ ಮತ್ತು ಹಿಂದುತ್ವದ ಪ್ರತಿಪಾದನೆಯ ಕಟ್ಟಾ ಕಾರ್ಯಕರ್ತ ನಾಗಿದ್ದುದನ್ನು ಸಹಿಸದೆ ಹತ್ಯೆ ನಡೆಸ ಲಾಗಿದೆ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಹತ್ಯೆಗೂ ಮುನ್ನ ಜಾಫರ್ ತನ್ನ ಐ–20 ಕಾರನ್ನು ಉಳಿದ ಆರೋಪಿಗಳಿಗೆ ಸಂಚು ರೂಪಿಸಲು ಮಂಡಗದ್ದೆಗೆ ಕಳುಹಿಸಿಕೊಟ್ಟಿರುವ ಬಗ್ಗೆ ಪುರಾವೆ ಕಂಡು ಬರುತ್ತಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.