ಮನೆ ರಾಜ್ಯ ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ?: ಯತೀಂದ್ರಗೆ ಸಿ.ಟಿ.ರವಿ ಪ್ರಶ್ನೆ

ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ?: ಯತೀಂದ್ರಗೆ ಸಿ.ಟಿ.ರವಿ ಪ್ರಶ್ನೆ

0

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾಡಿರುವ ಟೀಕೆಗೆ ಬಿಜೆಪಿ ನಾಯಕ ಸಿಟಿ ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು,  ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ. ಇವರು ಎಂದಾದರೂ ಪಕ್ಷದ ಕೆಲಸವನ್ನ ಮಾಡಿದ್ದಾರೆಯೇ ಎಂದು ಯತೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿ ಮಾತನಾಡಿದ ಅವರು, 1982ರಲ್ಲಿಯೇ ಅಮಿತ್ ಶಾ ಬಿಜೆಪಿಯ ಬೂತ್ ಅಧ್ಯಕ್ಷರಾಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು‌ ಎಂದು ಯತೀಂದ್ರ ವಿರುದ್ಧ ರವಿ ಕೆಂಡಕಾರಿದ್ದಾರೆ.

ನಾವು ವಿದ್ಯಾರ್ಥಿಗಳಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಆ್ಯಕ್ಟ್ ಕೇಸ್ ಹಾಕಿದ್ದರು. ಹಾಗಾದ್ರೆ, ನಾನು ಗೂಂಡಾನಾ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಯತೀಂದ್ರ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂಥವರಿಗೆ ಬಡವರ ಕಷ್ಟ ಕಾಣಿಸುತ್ತದೆಯೇ? ಚುನಾವಣೆ ಮುಗಿದ ಮೇಲೆ ಇವರೆಲ್ಲ ಎಲ್ಲಿರುತ್ತಾರೋ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಲೇಖನಅಕ್ರಮ ಕಟ್ಟಡ ಕೆಡವಲು ನಮ್ಮ ಬಳಿ ಹಣವಿಲ್ಲ: ಬಿಬಿಎಂಪಿ
ಮುಂದಿನ ಲೇಖನಬೆಳಗಾವಿ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 7.98 ಲಕ್ಷ ರೂ ವಶ