ಮನೆ ರಾಜ್ಯ ಹಾಸನ: ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣನ ಮನವಿ

ಹಾಸನ: ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣನ ಮನವಿ

0

ಹಾಸನ: ತಾಯಿ ಮೃತದೇಹ ನೋಡಲು ಬರುವಂತೆ ತಂಗಿಗೆ ಅಣ್ಣ ಮನವಿ ಮಾಡಿರುವ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ತಡರಾತ್ರಿ ತಾಯಿ ಹೊನ್ನಮ್ಮ(55) ಸಾವನ್ನಪ್ಪಿದ್ದಾಳೆ.

ಎಲ್ಲೇ ಇದ್ದರು ಬೇಗ ಮನೆಗೆ ಬಾ, ತಾಯಿಯ ಮುಖ ನೋಡಲು ಬಾ ಎಂದು ಮನೆಬಿಟ್ಟು ಹೋಗಿರುವ ತಂಗಿಗಾಗಿ ಅಣ್ಣ ಅಳಲು ತೋಡಿಕೊಂಡಿದ್ದಾನೆ.

ಹೊನ್ನಮ್ಮನ ಮಗಳು ಹರಿಣಿ ಗಂಡನನ್ನು ಬಿಟ್ಟು ತವರು ಸೇರಿದ್ದಳು. ತವರೂರಿನಲ್ಲಿ ವಿವಿಧ ಸ್ವಸಹಾಯ ಸಂಘಗಳಲ್ಲಿ ಐದು ಲಕ್ಷ ಸಾಲ‌ ಮಾಡಿದ್ದಳು. ಈ ಹಿನ್ನೆಲೆ ಪುತ್ರಿ ಹರಿಣಿ ಸಾಲ ತೀರಿಸಲಾಗದೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ.

ಹರಿಣಿ ಪರಾರಿಯಾದ ನಂತರ, ಮಗಳು ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರು ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಸಾಲಗಾರರ ಕಿರುಕುಳ ತಾಳಲಾರದೆ ಹೊನ್ನಮ್ಮ ಕಳೆದ ಮೂರು ದಿನಗಳಿಂದ ಊಟ, ತಿಂಡಿ ಬಿಟ್ಟಿದ್ದಳು. ಇದರಿಂದ ನಿನ್ನೆ (ಜು.10) ತಡರಾತ್ರಿ ತೀವ್ರ ಅಸ್ವಸ್ಥತೆಯಿಂದ ಹೊನ್ನಮ್ಮ ಸಾವನ್ನಪ್ಪಿದ್ದಾಳೆ.

ಆದ್ದರಿಂದ ಎಲ್ಲಿದ್ದರು ಮನೆಗೆ ಬರುವಂತೆ ತಂಗಿಗೆ ಅಣ್ಣ ಕೋರಿಕೊಳ್ಳುತ್ತಿದ್ದಾನೆ. ಅಣ್ಣ ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟುಕೊಂಡು ತಂಗಿಗಾಗಿ ಕಾಯುತ್ತಿದ್ದಾನೆ.

ಹಿಂದಿನ ಲೇಖನಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಮುಂದಿನ ಲೇಖನಕಿಡ್ನಿ ಸಮಸ್ಯೆ ಬಗೆಹರಿಸುತ್ತೆ ಸಾಸಿವೆ