ಮನೆ ಅಪರಾಧ ಹಾಸನ ನಗರಸಭೆ ಸದಸ್ಯನ ಹತ್ಯೆ ಪ್ರಕರಣ: ಪತ್ನಿಯಿಂದ ದೂರು ದಾಖಲು

ಹಾಸನ ನಗರಸಭೆ ಸದಸ್ಯನ ಹತ್ಯೆ ಪ್ರಕರಣ: ಪತ್ನಿಯಿಂದ ದೂರು ದಾಖಲು

0

ಹಾಸನ(Hassan): ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಪತ್ನಿ ಸೌಮ್ಯ ಪನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ನಿವಾಸಿ ಪೂರ್ಣ ಚಂದ್ರ  ಎಂಬುವವನ ವಿರುದ್ದ ಮೃತ ಪ್ರಶಾಂತ್ ಪತ್ನಿ ಸೌಮ್ಯ ದೂರು ನೀಡಿದ್ದಾರೆ.  ಪೂರ್ಣ ಚಂದ್ರ ಮತ್ತು ಸ್ನೇಹಿತರು ಕೆಎ 46 6388 ನಂಬರ್ ಆಟೋದಲ್ಲಿ ಬಂದು ಕೊಲೆಗೈದಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬುಧವಾರ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಪ್ರಶಾಂತ್ ರನ್ನು ಹಿಂಬಾಲಿಸಿ ಕೊಲೆ ಮಾಡಲಾಗಿದೆ. ಹಾಸನ ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಹತ್ಯೆ ನಡೆದಿದೆ.