ಮನೆ ಅಪರಾಧ ಹಾಸನ: ವೃದ್ಧೆಯನ್ನು ಕೊಲೆ ಮಾಡಿ, ಅತ್ಯಾಚಾರ- ಆರೋಪಿ ಬಂಧನ

ಹಾಸನ: ವೃದ್ಧೆಯನ್ನು ಕೊಲೆ ಮಾಡಿ, ಅತ್ಯಾಚಾರ- ಆರೋಪಿ ಬಂಧನ

0

ಹಾಸನ: ಜಮೀನಿನಲ್ಲಿ ವೃದ್ಧೆಯನ್ನು ಕೊಲೆ ಮಾಡಿ ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Join Our Whatsapp Group

ಮಿಥುನ್ ಕುಮಾರ್ (32) ಬಂಧಿತ ಆರೋಪಿ.

ಪ್ರಕರಣದ ವಿವರ:

ಏಪ್ರಿಲ್ 1 ರಂದು ತನ್ನ ಜಮೀನಿನ ಬಳಿ ತೆರಳಿದ್ದ 85 ವರ್ಷದ ವೃದ್ಧೆ ದಾರಿ ಗೊತ್ತಿಲ್ಲದೆ ಬೇರೆ ಕಡೆ ಹೋಗಿದ್ದಾರೆ. ಈ ವೇಳೆ ಬೈಕ್ ಮೂಲಕ ಬಂದ ಮಿಥುನ್ ಕುಮಾರ್ ಎಂಬಾತ ವೃದ್ಧೆ ಜೊತೆ ಮಾತನಾಡಿ ಜಮೀನಿಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾನೆ. ಈತನ ಮಾತು ನಂಬಿದ ವೃದ್ಧೆ ಬೈಕ್ ನಲ್ಲಿ ಕುಳಿತಿದ್ದಾರೆ. ಆದರೆ ಅಜ್ಜಿಯನ್ನು ಜಮೀನಿಗೆ ಕರೆದುಕೊಂಡು ಹೋಗದೆ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ.

ಅಜ್ಜಿಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಮಿಥುನ್ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಪ್ರತಿರೋಧವೊಡ್ಡಿದಾಗ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ಇತ್ತ ಜಮೀನಿಗೆ ಹೋಗಿ ಬರುತ್ತೇನೆ ಎಂದು ಹೋದ ತಾಯಿ ಮನೆಗೆ ಬಂದಿಲ್ಲ ಎಂದು ಏಪ್ರಿಲ್ 2 ರಂದು ಕುಟುಂಬಸ್ಥರು ಶೋಧ ಆರಂಭಿಸಿದ್ದಾರೆ. ಈ ವೇಳೆ ಯರೆಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಪೂರ್ಣ ಬೆತ್ತಲು ಸ್ಥಿತಿಯಲ್ಲಿ ವೃದ್ಧೆ ಮೃತದೇಹ ಪತ್ತೆಯಾಗಿದೆ.

ಘಟನೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಐದು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ವೃದ್ಧೆ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದ ಮಾಹಿತಿ ಲಭ್ಯವಾಗಿದೆ. ಅದೇ ಸುಳಿವು ಹಿಡಿದು ಮಿಥುನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಡಿದ ಪಾಪ ಕೃತ್ಯ ಒಪ್ಪಿಕೊಂಡಿದ್ದಾನೆ. ಕೊಲೆ ಅತ್ಯಾಚಾರ ಖಾತ್ರಿಯಾಗುತ್ತಿದ್ದಂತೆ ಅನುಮಾನಾಸ್ಪದ ಸಾವು ಪ್ರಕರಣವನ್ನು ಕೊಲೆ ಅತ್ಯಾಚಾರ ಪ್ರಕರಣವಾಗಿ ಬದಲಾಯಿಸಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ ಭರವಸೆಗಳನ್ನು ನಂಬಬೇಡಿ: ನಿರ್ಮಲಾ ಸೀತಾರಾಮನ್
ಮುಂದಿನ ಲೇಖನಹನುಮ ಅಂತಃಶಕ್ತಿಯ ಪ್ರತೀಕ: ವಿದ್ವಾನ್ ಕೃಷ್ಣಮೂರ್ತಿ