ಮನೆ ಅಪರಾಧ ಹಾಸನ: ಎಟಿಎಂ ಹೊತ್ತೊಯ್ದ ಖದೀಮರು

ಹಾಸನ: ಎಟಿಎಂ ಹೊತ್ತೊಯ್ದ ಖದೀಮರು

0

ಹಾಸನ: ಎಟಿಎಂ(ಆಟೊಮೆಟೆಡ್‌ ಟೆಲ್ಲರ್ ಮಷಿನ್)ಗೆ ಕನ್ನ ಹಾಕಿ ಹಣ ದೋಚುತ್ತಿದ್ದ ದುಷ್ಕರ್ಮಿಗಳು ಇದೀಗ ಎಟಿಎಂ ಅನ್ನೇ ಹೊತ್ತೊಯ್ದಿದ್ದಾರೆ. ನಗರದ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ಕಳೆದ ರಾತ್ರಿ ಖದೀಮರು ಕೈಚಳಕ ತೋರಿಸಿದ್ದಾರೆ.

Join Our Whatsapp Group

ರಾಜ್ಯ ಹೆದ್ದಾರಿ ಬದಿಯಲ್ಲಿರುವ ಇಂಡಿಯಾ ಒನ್ ಬ್ಯಾಂಕ್​ನ ಎಟಿಎಂ ಕಾಣದಿದ್ದಾಗ ಸ್ಥಳಕ್ಕೆ ಬಂದು ಪರಿಶೀಲಿಸಲಾಗಿದೆ. ಈ ವೇಳೆ ಯಂತ್ರ ಕಳ್ಳತನವಾಗಿರುವುದು ಗೊತ್ತಾಗಿದೆ. ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂಡಿಯಾ ಓನ್ ಎಟಿಎಂ ಕಂಪೆನಿಯವರು ಬೆಂಗಳೂರಲ್ಲಿದ್ದು, ಮಾಹಿತಿ ನೀಡಲಾಗಿದೆ. ಸ್ಥಳದಲ್ಲಿ ಕೆಲವು ಸುಳಿವುಗಳನ್ನು ಖದೀಮರು ಬಿಟ್ಟು ಹೋಗಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುತ್ತೇವೆ. ಆದಷ್ಟು ಬೇಗ ಪ್ರಕರಣ ಬಗೆಹರಿಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹಾಸನ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಾಡಹಗಲೇ ಬೀದರ್, ಮಂಗಳೂರು, ಮೈಸೂರಲ್ಲಿ ದರೋಡೆ ಪ್ರಕರಣ ನಡೆದ ಬೆನ್ನಲ್ಲೇ ಹಾಸನದಲ್ಲಿ ಎಟಿಎಂ ನಾಪತ್ತೆಯಾಗಿದೆ.