ಮನೆ ರಾಜಕೀಯ ವಾಚ್‌ ಪ್ರಕರಣವೇನು 300 ಕೋಟಿ ಅವ್ಯವಹಾರವೇ?: ಸಿದ್ದರಾಮಯ್ಯ

ವಾಚ್‌ ಪ್ರಕರಣವೇನು 300 ಕೋಟಿ ಅವ್ಯವಹಾರವೇ?: ಸಿದ್ದರಾಮಯ್ಯ

0

ಮೈಸೂರು: ವಾಚ್ ಪ್ರಕರಣ ಇತ್ಯರ್ಥವಾಗಿದ್ದರೂ, ಮತ್ತೆ ಕೆದಕುತ್ತಿದ್ದಾರೆ. ಆ ಪ್ರಕರಣವೇನು 300 ಕೋಟಿ ಅವ್ಯವಹಾರವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ವಾಚ್‌ ಕಟ್ಟಿಕೊಂಡಿರಲಿಲ್ವಾ ಎಂದು ಈಗ ಪ್ರತಿವಾದ ಮಾಡಿದರೆ ಹೇಗೆ? ಆ ವಾಚ್‌ಗೆ 35 ಲಕ್ಷದಿಂದ 40 ಲಕ್ಷ ಇರಬಹುದು. ಈಗ ನಡೆದಿರುವ 300 ಕೋಟಿ ಅವ್ಯವಹಾರವೇ ಅದು? ಹಾಗೆಂದು ನಾನೇನೂ ಸಮರ್ಥಿಸಿಕೊಳ್ಳುತ್ತಿಲ್ಲ ಎಂದರು.

ಕಳ್ಳತನದ ವಾಚ್‌ ಎಂದು ಕುಮಾರಸ್ವಾಮಿ ಹೇಳಿದ್ದರಿಂದ ಪ್ರಕರಣವನ್ನು ಆಗಲೇ ಎಸಿಬಿಗೆ ವಹಿಸಿದ್ದೆ. ತನಿಖೆಯಾಗಿ ನನಗೆ ವಾಚ್‌ ಕೊಟ್ಟ ದುಬೈನ ಡಾ.ವರ್ಮಾ ಎಂಬುವರು ಪ್ರಮಾಣಪತ್ರ ಸಲ್ಲಿಸಿ ರಸೀದಿ ಕೂಡ ನೀಡಿದ್ದು, ಪ್ರಕರಣ ಇತ್ಯರ್ಥವಾಗಿದೆ. ಸರ್ಕಾರಕ್ಕೇ ವಾಚ್‌ ಒಪ್ಪಿಸಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹಿಂದಿನ ಲೇಖನಆರ್ ಟಿಐ ಅಡಿ ಕೇಳಿದ ಮಾಹಿತಿ ನೀಡದ ತಹಶೀಲ್ದಾರ್ ಗೆ ದಂಡ
ಮುಂದಿನ ಲೇಖನನ್ಯಾಯಮಂಡಳಿ ಸುಧಾರಣಾ ಕಾಯಿದೆ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಜುಲೈನಲ್ಲಿ ಅಂತಿಮ ವಿಲೇವಾರಿ