ಮನೆ ಸುದ್ದಿ ಜಾಲ ಹಾಸನ: ಚಿರತೆ ಸೆರೆ ಹಿಡಿದು ಬೈಕ್ ನಲ್ಲಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕ

ಹಾಸನ: ಚಿರತೆ ಸೆರೆ ಹಿಡಿದು ಬೈಕ್ ನಲ್ಲಿ ತಂದು ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕ

0
ಸಾಂದರ್ಭಿಕ ಚಿತ್ರ

Join Our Whatsapp Group

ಹಾಸನ:  ಜಮೀನಿಗೆ  ಹೋಗಿದ್ದ  ವೇಳೆ  ದಾಳಿ  ಮಾಡಿದ  ಚಿರತೆ ಯನ್ನು  ಓರ್ವ  ಯುವಕ ಸೆರೆಹಿಡಿದಿದ್ದು,  ಅರಣ್ಯ  ಇಲಾಖೆಗೆ  ಒಪ್ಪಿಸಿರುವಂತಹ  ಘಟನೆ  ಜಿಲ್ಲೆಯ  ಅರಸೀಕೆರೆ  ತಾಲೂಕಿನ ಬಾಗಿವಾಳು  ಗ್ರಾಮದಲ್ಲಿ  ನಡೆದಿದೆ.  

ವೇಣುಗೋಪಾಲ್  ಅಲಿಯಾಸ್  ಮುತ್ತು

 ಚಿರತೆ  ಹಿಡಿದ  ಯುವಕ. ಜಿಲ್ಲೆಯ  ಅರಸೀಕೆರೆ  ತಾಲೂಕಿನ  ಗಂಡಸಿ  ಹೋಬಳಿಯ ಬಾಗಿವಾಳು ಗ್ರಾಮಕ್ಕೆ  ನುಗ್ಗಿದ  ಚಿರತೆ  ಜಮೀನಿಗೆ  ಹೋಗುತ್ತಿದ್ದ  ಯುವಕನ  ಮೇಲೆ  ದಾಳಿ  ಮಾಡಿದೆ.  ಯುವಕ ಚಿರತೆಯನ್ನು  ಓಡಿಸಲು  ಮುಂದಾಗಿದ್ದು  ಮತ್ತೆ  ದಾಳಿ  ಮಾಡಿದೆ.        

ದಾಳಿ  ವೇಳೆ  ಕೈ  ಮತ್ತು  ಕಾಲು  ದೇಹಕ್ಕೆ  ಗಾಯವಾಗಿದ್ದರೂ  ಚಿರತೆ ಯೊಂದಿಗೆ  ಸೆಣೆಸಾಡಿದ್ದಾನೆ. ಜಮೀನಿಗೆ  ಕೊಂಡೊಯ್ಯುತ್ತಿದ್ದ  ಬೈಕ್  ನಲ್ಲಿರುವ  ಹಗ್ಗವನ್ನು  ಎತ್ತಿ ಕೊಂಡು ಚಿರತೆ  ದಾಳಿ ಮಾಡಲು  ಮುಂದಾದಾಗ  ಅದಕ್ಕೆ  ಕುಣಿಕೆ  ಹಾಕಿ  ಬಿಗಿದಿದ್ದಾನೆ.  ಈ ವೇಳೆ ಚಿರತೆಯ ಕಾಲುಗಳು ಹಾಗೂ ದೇಹಕ್ಕೆ ಹಗ್ಗ ಬಿಗಿದು ದಾಳಿ ಮಾಡಲು ಸಾಧ್ಯವಾಗದ  ರೀತಿ  ಬಿದ್ದಿದೆ.

ಆಗ ದೇಹದ ಭಾಗಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ನಾಲ್ಕು ಕಾಲುಗಳಿಗೆ ಕಟ್ಟಿದ್ದಾನೆ. ಕೋಲುಗಳ  ಸಹಾಯದಿಂದ ಬೈಕ್ ನ  ಹಿಂಭಾಗದಲ್ಲಿ ಕಟ್ಟಿಕೊಂಡು ಸೀದಾ ಗ್ರಾಮಕ್ಕೆ  ಹೋಗಿ  ನಂತರ ಚಿರತೆಯನ್ನು ಅರಣ್ಯ ಅಧಿಕಾರಿಗಳಿಗೆ  ಒಪ್ಪಿಸಿದ್ದಾನೆ.