ಮನೆ ದೇವಸ್ಥಾನ ಅ.13 ರಿಂದ ಹಾಸನಾಂಬೆಯ ದರ್ಶನ ಪ್ರಾರಂಭ

ಅ.13 ರಿಂದ ಹಾಸನಾಂಬೆಯ ದರ್ಶನ ಪ್ರಾರಂಭ

0

ಹಾಸನ(Hassan):  ವರ್ಷಕೊಮ್ಮೆ ತೆರಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲನ್ನು ಈ ಬಾರಿ ಅಕ್ಟೋಬರ್​​ 13 ಮಧ್ಯಾಹ್ನ 12.30 ಕ್ಕೆ ತೆರೆಯಲಾಗುತ್ತದೆ.

ಅ.13ರಿಂದ ಅ.27ರವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇಂದು ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಅರ್ಚಕರು ದೇವಿಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ತಂದಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್​​​ನಲ್ಲಿ ದೇವಿಯ ಒಡವೆಗಳನ್ನು ಬೆಳ್ಳಿ ರಥದಲ್ಲಿ ದೇವಸ್ಥಾನಕ್ಕೆ ತಂದಿದ್ದಾರೆ.

 ಒಟ್ಟು 15 ದಿನಗಳ ಕಾಲ ಹಾಸನಾಂಬ ದೇವಾಲಯ ಓಪನ್​ ಮಾಡಲಾಗುತ್ತೆ. ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣದ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಾಮಾರಿ ಕೊರೊನಾ ಹಿನ್ನೆಲೆ ಕಳೆದ ಮೂರು ವರ್ಷ ಹಾಸನಾಂಬೆ ಉತ್ಸವ ಸರಳವಾಗಿ ನಡೆದಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ಉತ್ಸವ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಆಶ್ವೀಜ ಮಾಸದ ಮೊದಲ‌ ಗುರುವಾರ ಗರ್ಭಗುಡಿ ಬಾಗಿಲು ತೆರೆಯಲಿದೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿ ಲಕ್ಷಾಂತರ ಭಕ್ತರು ದರ್ಶನ ಪಡೆಯಲಿದ್ದಾರೆ.  

ಹಿಂದಿನ ಲೇಖನಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಗೆಲುವು
ಮುಂದಿನ ಲೇಖನಇನ್ನೆರಡು ದಿನ ದಸರಾ ದೀಪಾಲಂಕಾರ ಮುಂದುವರಿಕೆ