ಮನೆ ಸುದ್ದಿ ಜಾಲ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ – 6 ಮಂದಿ ಸಾವು, 28 ಮಂದಿಗೆ ಗಾಯ

ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ – 6 ಮಂದಿ ಸಾವು, 28 ಮಂದಿಗೆ ಗಾಯ

0

ಚೆನ್ನೈ : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಉಂಟಾಗುವ ಸಾವಿನ ಸಂಖ್ಯೆಗಳು ಹೆಚ್ಚುತ್ತಲೇ ಇವೆ. ಕೆಲ ದಿನಗಳ ಹಿಂದಷ್ಟೇ ಕರ್ನೂಲ್‌ ಬಳಿ ಸಂಭವಿಸಿದ ಬಸ್ ಬೆಂಕಿ ದುರಂತಕ್ಕೆ 20 ಮಂದಿ ಬಲಿಯಾಗಿದ್ದರು.

ಇದಾದ ಬೆನ್ನಲ್ಲೇ ಜಲ್ಲಿಕಲ್ಲು ತುಂಬಿದ ಟ್ರಕ್‌ನ ಚಾಲಕ ಗುಂಡಿ ತಪ್ಪಿಸಲು ಹೋಗಿ ಬಸ್‌ಗೆ ಡಿಕ್ಕಿ ಹೊಡೆದ, ಪರಿಣಾಮ ಜಲ್ಲಿಕಲ್ಲು ಬಸ್ ಮೇಲೆ ಹರಡಿ ಪ್ರಯಾಣಿಕರು ಮೃತಪಟ್ಟರು. ಮತ್ತೊಂದೆಡೆ, ಜೈಪುರದಲ್ಲಿ ಅತಿವೇಗದಲ್ಲಿ ಚಲಿಸಿದ ಡಂಪರ್ ಟ್ರಕ್ 12ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು 14 ಜನರು ಸಾವನ್ನಪ್ಪಿದರು. ಇಂತಹ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇವೆ.

ಇದರ ನಡುವೆ ತಮಿಳುನಾಡಿನಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಎರಡೂ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಇಡಕಲ್‌ ಬಳಿ ಘಟನೆ ನಡೆದಿದ್ದು, ಸುಮಾರು 28 ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.