ಮನೆ ಕಾನೂನು ಎಲ್ಲಾ ಅಂಧ ವಕೀಲರಿಗೆ ಬ್ರೈಲ್ ಭಾಷಾಂತರ ಲಭ್ಯತೆ: ಎನ್’ಐಸಿಗೆ ಸಿಜೆಐ ಚಂದ್ರಚೂಡ್ ಸೂಚನೆ

ಎಲ್ಲಾ ಅಂಧ ವಕೀಲರಿಗೆ ಬ್ರೈಲ್ ಭಾಷಾಂತರ ಲಭ್ಯತೆ: ಎನ್’ಐಸಿಗೆ ಸಿಜೆಐ ಚಂದ್ರಚೂಡ್ ಸೂಚನೆ

0

ನ್ಯಾಯಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬ್ರೈಲ್’ಗೆ ಭಾಷಾಂತರಿಸುವ ಸಾಫ್ಟ್’ವೇರ್ ಎಲ್ಲಾ ವಕೀಲರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಹಿರಿಯ ವಕೀಲ ಎಸ್ಕೆ ರುಂಗ್ಟಾ ಅವರೊಂದಿಗೆ ಮಾತುಕತೆ ನಡೆಸುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್’ಐಸಿ) ಸೂಚಿಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಗುರುವಾರ ಹೇಳಿದ್ದಾರೆ.

ಪ್ರಕರಣವೊಂದರ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್ ಅವರು ದೃಷ್ಟಿ ಕಳೆದುಕೊಂಡಿರುವ ವಿಕಲಚೇತನರಾದ ಹಿರಿಯ ವಕೀಲ ರುಂಗ್ಟಾ ಅವರನ್ನು ಉದ್ದೇಶಿಸಿ ನೀವು ಹೇಗೆ ಬೇರೊಬ್ಬ ಕಕ್ಷೀದಾರರು ಉಲ್ಲೇಖಿಸುತ್ತಿರುವ ಪಠ್ಯ ಸಂಗ್ರಹವನ್ನು ಅನುಸರಿಸಲು ಸಾಧ್ಯವಾಗುತ್ತಿದೆ ಎಂದು ಪ್ರಶ್ನಿಸಿದರು.

 ಆಗ ರುಂಗ್ಟಾ ಆ ಸಂಗ್ರಹವು ಪೆನ್’ಡ್ರೈವ್’ನಲ್ಲಿದ್ದು ಅದನ್ನು ತಮ್ಮ ಕಂಪ್ಯೂಟರ್’ನಿಂದ ಬ್ರೈಲ್’ಗೆ ಅನುವಾದಿಸಲಾಗುತ್ತದೆ ಎಂದು ರುಂಗ್ಟಾ ತಿಳಿಸಿದರು. ಆಗ ಸಿಜೆಐ ಅವರು “ಇ- ಸಮಿತಿ ಅಧ್ಯಕ್ಷನಾಗಿ ಅದನ್ನು (ಎಲ್ಲರಿಗೂ) ಒದಗಿಸುವುಂತೆ ಮಾಡುವುದು ನನ್ನ ಧ್ಯೇಯ” ಎಂದರು. ಜೊತೆಗೆ ರುಂಗ್ಟಾ ಅವರೊಂದಿಗೆ ಎನ್’ಐಸಿಯ ಮುಖ್ಯಸ್ಥರು ಸಮಾಲೋಚನೆ ನಡೆಸಲು ಕೇಳಿಕೊಳ್ಳುವುದಾಗಿ ತಿಳಿಸಿದರು.

ಹಿಂದಿನ ಲೇಖನರಾಯಲ್ ಎನ್’ಫೀಲ್ಡ್’ನಿಂದ ಹೊಸ ಬೈಕ್: ಪ್ರಿ ಬುಕಿಂಗ್ ಶುರು
ಮುಂದಿನ ಲೇಖನಮೈಸೂರು: ನ.29ರ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಷಷ್ಠಿ ಮಹೋತ್ಸವ ರದ್ಧು