ಮನೆ ಆರೋಗ್ಯ ತಲೆನೋವು: ಭಾಗ ಎರಡು

ತಲೆನೋವು: ಭಾಗ ಎರಡು

0

ಟೆನ್ಷನ್ ತಲೆನೋವು

ಆಧುನಿಕ ಜೀವನದಲ್ಲಿ ಇದು ಸರ್ವೇಸಾಧಾರಣವಾದ ತಲೆನೋವು. ಜನಸಂಖ್ಯೆಯ ಶೇಕಡ 90 ಮಂದಿ ಆಗಾಗ ಈ ತಲೆನೋವಿಗೆ ಗುರಿಯಾಗುತ್ತಿರುತ್ತಾರೆಂದರೆ ಅತಿಶಯೋಕ್ತಿಯಲ್ಲ.

Join Our Whatsapp Group

    ಈ ತಲೆನೋವಿದ್ದರೂ ಕೂಡಾ, ಮನುಷ್ಯರು ತಾವು ಸಾಮಾನ್ಯವಾಗಿ ಮಾಡಿಕೊಳ್ಳುವ ಕೆಲಸಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ.

ಟೆನ್ಷನ್ ತಲೆನೋವಿನ ಎರಡು ಪ್ರಕಾರಗಳಿವೆ :

1. ಆಯಾ ಘಟನೆಗಳ ಮೂಲವಾಗಿ ಬರುವಂತಹವು. ಇವುಗಳನ್ನು ಎನ್ನುತ್ತಾರೆ Episodic Headache ಟೆನ್ಷನ್,ಮಾನಸಿಕ ಒತ್ತಡವನ್ನುಂಟುಮಾಡುವ ಘಟನೆಗಳು, ಕೋಪವನ್ನು ಇಲ್ಲವೇ,  ಅಂದೋಳನವನ್ನುಂಟು  ಮಾಡುವ ಘಟನೆಗಳಿಂದಾಗಿ ಇವು ಬರುತ್ತವೆ.

2. ನಮಗೆ ಬರುವ ತಲೆನೋವುಗಳಲ್ಲಿ ಶೇಕಡ 75ರಿಂದ 80ರಷ್ಟು ತಲೆನೋವುಗಳು ಈ ರೀತಿಯವೇ  ಆಗಿರುತ್ತವೆ.

3.ಕ್ರಾನಿಕ್ ತಲೆನೋವುಗಳು,ಎಷ್ಟೋ ದಿನಗಳಿಂದ ಬಿಡದೆ ಕಾಡುತ್ತಿರುವ ಆಂದೋಲನ,ಇಲ್ಲವೇ ಮನುಷ್ಯರಲ್ಲಿ ಅಂತರ್ಗತವಾಗಿ ಅಡಗಿಕೊಂಡಿರುವ ಖಿನ್ನತೆ ಮೊದಲಾದವು, ಕ್ರಾನಿಕ್  ರೀತಿಯ ತಲೆನೋವಿಗೆ ಕರಣೀ ಭೂತವಾಗಿರುತ್ತವೆ.

ಲಕ್ಷಣಗಳು

 ★ಸಾಧಾರಣವಾಗಿ ಸಂಜೆಯ ವೇಳೆಗೆ ಬರುತ್ತದೆ. ಹಗಲಿನ ಕೆಲಸಗಳಿಂದ ಅಷ್ಟು ಹೊತ್ತಿಗೆ ಆ ವ್ಯಕ್ತಿ ಪೂರ್ಣವಾಗಿ ಆಯಾಸಗೊಂಡಿರುತ್ತಾನೆ.

★ ಹಣೆಯ ಸುತ್ತ ಹುರಿಯಿಂದ ಬಿಗಿದು ಕಟ್ಟಿದಂತೆ ನೋವು

★ ತಲೆ ಮತ್ತೇರಿದಂತಿರುತ್ತದೆ.

 ★ಕಣತಲೆಯಲ್ಲಿ ಸೂಜಿಗಳಿಂದ ಚುಚ್ಚುತ್ತಿರುವಂತೆ ನೋವು

 ★ಹಣೆ, ಕತ್ತು,ಕಣತಲೆ ಬಹಳ ಸೂಕ್ಷ್ಮವಾಗುತ್ತವೆ.

ಎಷ್ಟು ಹೊತ್ತು ಇರುತ್ತದೆ?

   ★ತೀವ್ರವಾದ ನೋವು ಕೆಲವು ಗಂಟೆಗಳವರೆಗೂ ಇರುತ್ತದೆ. ಟೆನ್ಷನ್ ಅನುಭವ ಮಾತ್ರ ಇನ್ನೂ ಹೆಚ್ಚು ಹೊಂದಿರಬಹುದು.

 ★ಕೆಲವರಿಗೆ ಈ ತಲೆನೋವು ದಿನಗಟ್ಟಲೆ, ತಿಂಗಳುಗಟ್ಟಲೆ, ಐ ಕೆಲವು ವರ್ಷಗಳವರೆಗೂ ಕೂಡಾ ಆಗಾಗ ಬರುತ್ತಿರಬಹುದು.

ಕಾರಣಗಳು

★ ಒಂದೇ ಸಮನೆ ಒಂದು ವಿಷಯದ ಮೇಲೆಯೇ, ಬಹಳ ಹೊತ್ತು ಆಲೋಚನೆಗಳನ್ನು ಕೇಂದ್ರೀಕರಿಸಿದಾಗ ನೆತ್ತಿಯ ಸ್ನಾಯುಗಳು ಸಂಕೋಚ ಗೊಳ್ಳುವುದರಿಂದ ಬರುತ್ತದೆ.

★ ಕನ್ನಡಕಗಳನ್ನು ಉಪಯೋಗಿಸುವ ಅಗತ್ಯವಿದ್ದರೂ ಕೂಡಾ(ಅಂದರೆ ದೃಷ್ಟಿ ದೋಷವಿದ್ದಾಗ),ಅವುಗಳನ್ನು ಉಪಯೋಗಿಸಿದವರಿಗೆ ಇದು ಹೆಚ್ಚಾಗಿ ಬರುತ್ತದೆ.

★ ಭಾವನಾತ್ಮಕ ಒತ್ತಡಗಳಿಗೆ ಒಳಗಾಗುವವರಿಗೆ ಬರುತ್ತದೆ.ಖಿನ್ನತೆಯಿಂದ ಬಾಧೆ ಪಡುತ್ತಿರುವವರಿಗೆ ಆತಂಕ, ಆಂದೋಳನೆಗೆ ಒಳಗಾಗುವವರಿಗೆ ಟೆನ್ಷನ್ ತಲೆನೋವು ಆಗಾಗ ಬರುವುದು ಸಹಜ.

ಗೃಹ ಚಿಕಿತ್ಸೆ 

    ★  ತಲೆನೋವಿನಿಂದ ನರಳುವ ವ್ಯಕ್ತಿ ಮಾಡಬೇಕಾದ ಮುಖ್ಯವಾದ ಕೆಲಸವೆಂದರೆ, ಅವುಗಳಿಗೆ ಮೂಲ ಕಾರಣವಾದ ಮಾನಸಿಕ ಒತ್ತಡಗಳಿಂದ, ವೇದನೆಗಳಿಂದ ದೂರವಾಗುವುದು, ಅಂತಹ ಘಟನೆಗಳಿಗೆ ಪ್ರಶಾಂತ ಮನೋಭಾವದಿಂದ ಸ್ಪಂದಿಸುವುದು.

★ ಸರಿಯಾಗಿ ನಿದ್ರೆ ಮಾಡಬೇಕು.

 ★ ಕತ್ತಿನ ಮೇಲೆ ತಲೆಯ ಮೇಲೆ ಮಸಾಜ್ ಮಾಡಿಸಿಕೊಳ್ಳುವುದರಿಂದ ಒಳ್ಳೆಯ ಉಪಶಮನ ದೊರಕುತ್ತದೆ.

  ★ಪ್ಯಾರಾಸಿಟಮಾಲ್ ನಂತಹ ಸಾಮಾನ್ಯ ನೋವು ನಿವಾರಕಗಳನ್ನು ಸೂಚಿತ ಪ್ರಮಾಣದಲ್ಲಿ ಸೇವಿಸುವುದು .

ಹಿಂದಿನ ಲೇಖನವಿದ್ಯುತ್ ಶಾರ್ಟ್ ಸರ್ಕ್ಯೂಟ್‌: ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ
ಮುಂದಿನ ಲೇಖನತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ