ಮನೆ ಆರೋಗ್ಯ ಸಬ್ಬಸ್ಸಿಗೆ ಸೊಪ್ಪಿನಲ್ಲಿರುವ ಆರೋಗ್ಯ ಲಾಭಗಳು

ಸಬ್ಬಸ್ಸಿಗೆ ಸೊಪ್ಪಿನಲ್ಲಿರುವ ಆರೋಗ್ಯ ಲಾಭಗಳು

0

ಚಳಿಗಾಲ ಶುರುವಾದ ಕೂಡಲೇ, ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿ-ಹಣ್ಣುಗಳ ನಡುವೆ, ಹಚ್ಚ ಹಸಿರಿನ ಸೊಪ್ಪುಗಳ ಕಾರುಬಾರು ಕೂಡ ಜೋರಾಗಿರುತ್ತದೆ. ಈ ಸಮಯದಲ್ಲಿ ಹಲವಾರು ಬಗೆಯ ಹಸಿರೆಲೆ ಸೊಪ್ಪು ತರಕಾರಿಗಳು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭರಪೂರ ಲಭಿಸುತ್ತದೆ.

ಇನ್ನು ಈ ಹಸಿರೆಲೆ ತರಕಾರಿಗಳಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಇಂತಹ ಸೊಪ್ಪುಗಳನ್ನು ಯಾರೂ ಕೂಡ, ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ ಒಂದು ವೇಳೆ, ಇಂತಹ ತರಕಾರಿಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ನಿಮಗೆ ನೀವೇ ಲಾಸ್ ಮಾಡಿ ಕೊಂಡ ಹಾಗೆ! ಬನ್ನಿ ಇಂದಿನ ಲೇಖನದಲ್ಲಿ ಸಬ್ಬಸ್ಸಿಗೆ ಸೊಪ್ಪಿನಲ್ಲಿ ನಿಮಗೆ ಗೊತ್ತಿಲ್ಲದ ಆರೋಗ್ಯದ ಲಾಭ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಹೃದಯಕ್ಕೆ ತುಂಬಾ ಒಳ್ಳೆಯದು

• ಮೊದಲಿಗೆ ಹೃದಯದ ಆರೋಗ್ಯ ಚೆನ್ನಾಗಿ ಇರಬೇಕೆಂದರೆ, ಆಹಾರ ಪದ್ಧತಿ ಹಾಗೂ ಸರಿಯಾದ ಜೀವನಶೈಲಿ ಅತ್ಯಗತ್ಯ. ಪ್ರಮುಖವಾಗಿ ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರ ಇರು ವುದರ ಜೊತೆಗೆ, ಬಾಯಿಗೆ ರುಚಿ ನೀಡುವ ಕೆಲವೊಂದು ಆಹಾರ ಗಳಿಂದ ದೂರವಿದ್ದರೆ, ಹೃದಯಕ್ಕೆ ಏನೂ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳ ಬಹುದು.

•  ಇನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನಿಯಮಿತ ವಾಗಿ ಸಬ್ಬಸಿಗೆ ಸೊಪ್ಪಿನ್ನು ಕೂಡ ಸೇರಿಸುವುದರಿಂದ, ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರ ಣದಲ್ಲಿ ಇಟ್ಟು ಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಹೃದಯಕ್ಕೆ ಯಾವುದೇ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳಬಹುದಾಗಿದೆ.

ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ

• ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರಗಳು, ದೇಹದ ಮೂಳೆ, ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬಹಳ ಮುಖ್ಯ.

•  ಹೀಗಾಗಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಈ ಸಬ್ಬಸ್ಸಿಗೆ ಸೊಪ್ಪನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವು ದರಿಂದ, ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ.

• ಇದರಿಂದ ಮೂಳೆಗಳು ಸಾಕಷ್ಟು ಬಲಗೊಳ್ಳುತ್ತವೆ ಮತ್ತು ಮುಂದಿನ ದಿನಗಳಲ್ಲಿ ಆಸ್ಟಿಯೋ ಪೋರೋಸಿಸ್ ಸಮಸ್ಯೆಗಳು ಕಂಡು ಬರುವುದಿಲ್ಲ.

ನಿದ್ದೆ ಸಮಸ್ಯೆ ಇರುವವರಿಗೆ

• ನಮಗೆಲ್ಲಾ ಗೊತ್ತೇ ಇರುವ ಹಾಗೆ, ಮನುಷ್ಯ ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಇದರಿಂದಾಗಿ ಹಲವಾರು ಅರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ.

• ಕೆಲವೊಮ್ಮೆ ಅತಿಯಾದ ಒತ್ತಡದ ಜೀವನಶೈಲಿ ಹಾಗೂ ಮಾನಸಿಕ ಒತ್ತಡದಿಂದಾಗಿ ಹೆಚ್ಚಿನವರಲ್ಲಿ ನಿದ್ರಾಹೀನತೆ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಈ ಸಮಸ್ಯೆ ಎದುರಿಸು ವವರು, ಸಬ್ಬಸಿಗೆ, ಸೊಪ್ಪನ್ನು ತಮ್ಮ ಆಹಾರ ಪದ್ಧತಿಯಲ್ಲಿ, ಸೇರಿಸಿಕೊಂಡರೆ ಬಹಳ ಒಳ್ಳೆಯದು.

• ಯಾಕೆಂದರೆ, ಈ ಸೊಪ್ಪಿನಲ್ಲಿ ಫ್ಲೇವ ನಾಯ್ಡ್ಸ್ ಮತ್ತು ಬಿ-ಕಾಂಪ್ಲೆಕ್ಸ್ ಎನ್ನುವ ಸಂಯುಕ್ತ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಅಂಶ

• ಈ ಸೊಪ್ಪಿನಲ್ಲಿ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿ ಸಿಗುವುದ ರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

• ಅಷ್ಟೇ ಅಲ್ಲದೆ ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್ ಎ ಅಂಶ ಕೂಡ, ಸಿಗುವುದರಿಂದ, ಕಣ್ಣಿನ ದೃಷ್ಟಿಯ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು.

ಸಕ್ಕರೆ ಕಾಯಿಲೆ ಇರುವವರಿಗೆ

ಇನ್ನು ಸಕ್ಕರೆಕಾಯಿಲೆ ಅಥವಾ ಮಧುಮೇಹ, ಇರುವ ಜನರಿಗೆ, ಈ ಸೊಪ್ಪು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಅಧ್ಯಾಯನದ ವರದಿಯಲ್ಲಿ, ಮಿತವಾಗಿ ಈ ಸೊಪ್ಪು ಸೇವನೆ ಮಾಡುವುಸದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಹಿಂದಿನ ಲೇಖನರೈಭ್ಯ-ಯವಕ್ರೀತ
ಮುಂದಿನ ಲೇಖನಮೈಸೂರು: 15 ದಿನದೊಳಗೆ ಕಬ್ಬು ಕಟಾವಿಗೆ ಜಿಲ್ಲಾಧಿಕಾರಿ ಸೂಚನೆ