ಮನೆ ರಾಜ್ಯ ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ: ನಿಷೇಧಾಜ್ಞೆ ತೆರವು

ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ: ನಿಷೇಧಾಜ್ಞೆ ತೆರವು

0

ಶಿವಮೊಗ್ಗ(Shivamogga): ವೀರ ಸಾವರ್ಕರ್ – ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಬೂದಿಮುಚ್ಚಿದ ಕೆಂಡದಂತಿದ್ದ ನಗರ ಈಗ ಸಹಜ ಸ್ಥಿತಿಗೆ ಮರಳಿದೆ.

ಸ್ವಾತಂತ್ರ್ಯ ದಿನ ನಗರದ ಎಎ ಸರ್ಕಲ್​ನಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ ಕಾರಣಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಯೂವಕ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿತ್ತು.

ಇದೀಗ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದ್ದು ಶಾಲಾ- ಕಾಲೇಜುಗಳು ಪುನರಾರಂಭಗೊಂಡಿವೆ. ಅಂಗಡಿ, ಮುಂಗಟ್ಟುಗಳು ಮತ್ತೆ ಆರಂಭವಾಗಿದ್ದು, ವ್ಯಾಪಾರ- ವಹಿವಾಟು ಎಂದಿನಂತೆ ಸಾಗಿದೆ. ಆಟೋ, ಕಾರು, ಬಸ್ ಗಳ ಓಡಾಟ ಸಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಆದರೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಕರಿಗೆ ಅವಕಾಶ ನೀಡಿಲ್ಲ. 

ಹಿಂದಿನ ಲೇಖನಕಲ್ಲಿದ್ದಲು ಹಗರಣ: ಕಳಂಕಿತರ ಪಟ್ಟಿಯಲ್ಲಿ ವಿನಾಕಾರಣ ಕಂಪನಿಯೊಂದರ ಹೆಸರು ಸೇರಿಸಿದ್ದ ಕೇಂದ್ರಕ್ಕೆ ಸುಪ್ರೀಂ ದಂಡ
ಮುಂದಿನ ಲೇಖನ8 ಯೂಟ್ಯೂಬ್ ಚಾನಲ್ ನಿಷೇಧಿಸಿದ ಕೇಂದ್ರ