ಮುಲ್ಲೀನ್ ಟೀ ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಮುಲ್ಲೀನ್ ಟೀ ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ. ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ.
ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.