ಮನೆ ಮನರಂಜನೆ ನಟಿ ಅರೋಹಿತ ಎಎಪಿ ಸೇರ್ಪಡೆ

ನಟಿ ಅರೋಹಿತ ಎಎಪಿ ಸೇರ್ಪಡೆ

0

ಬೆಂಗಳೂರು(Bengaluru): ‘ಅಧ್ಯಕ್ಷ‘ ಸಿನಿಮಾ ಖ್ಯಾತಿಯ ನಟಿ ಅರೋಹಿತ (ಪ್ರಿಯಾಂಕ) ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

ಆಮ್‌ ಆದ್ಮಿ ಪಕ್ಷ (ಎಎಪಿ)ದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಅರೋಹಿತ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು ಅರೋಹಿತ ಅಂತಹ ಯುವ ಪ್ರತಿಭೆಗಳು ಸಮಾಜದಲ್ಲಿ ಬದಲಾವಣೆ ತರಬೇಕು. ಇಂತಹ  ಹಂಬಲದೊಂದಿಗೆ ಅವರು ಎಎಪಿ ಸೇರುತ್ತಿದ್ದಾರೆ ಎಂದರು.

ಕರಾಟೆ ಪಟುವಾಗಿರುವ ಅರೋಹಿತ ಬಿ.ಕಾಂ ಪದವಿ ಪಡೆದಿದ್ದಾರೆ. ರಾಜಕೀಯವಾಗಿ ತುಂಬಾ ತಿಳಿದುಕೊಂಡಿರುವ ಅವರು ಪಕ್ಷದ ದೆಹಲಿ ಕಾರ್ಯಕ್ರಮಗಳ ಬಗ್ಗೆ ತುಂಬಾ ಅರಿತಿದ್ದಾರೆ ಎಂದು ಎಎಪಿ ಪಕ್ಷ ಟ್ವೀಟ್‌ ಮಾಡಿದೆ.

 ಅರೋಹಿತ ಅವರು ಆಟಗಾರ, ಕಿರಿಕ್‌ ಪಾರ್ಟಿ, ಜಗ್ಗಿ, ಭಾಗ್ಯ ರಾಜ್‌, ರಾಜರಾಜೇಂದ್ರ, ಆಯುಷ್ಮಾನ್‌ ಭವ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಿಂದಿನ ಲೇಖನಮಿಮ್ಸ್’ನಲ್ಲಿ ರೋಗಿಗಳ ಸಾವು: ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ- ಡಾ. ಕೆ. ಸುಧಾಕರ್
ಮುಂದಿನ ಲೇಖನಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಪ್ರಧಾನಿ ಮೋದಿ ಆಗಮನ…?