ಮನೆ ಆರೋಗ್ಯ ಅಂಜೂರ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನ

ಅಂಜೂರ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನ

0

ಬೇರೆ ಎಲ್ಲ ಸಮಯಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಸ್ವಲ್ಪ ಜಾಸ್ತಿ. ನಿರ್ಲಕ್ಷ್ಯ ಮಾಡಿದರೆ ಸಣ್ಣ ಪುಟ್ಟ ಕಾಯಿಲೆಗಳು ದೊಡ್ಡ ಕಾಯಿಲೆಗಳಾಗಿ ಬದಲಾಗಬಹುದು. ಹಾಗಾಗಿ ನಮ್ಮ ದೇಹಕ್ಕೆ ಉತ್ತಮ ಪೌಷ್ಟಿಕ ಸತ್ವಗಳನ್ನು ಮತ್ತು ಆರೋಗ್ಯಕರ ಪ್ರಯೋಜನ ಗಳನ್ನು ಈ ಸಂದರ್ಭದಲ್ಲಿ ಕೊಡುವಂತಹ ಆಹಾರ ಪದಾರ್ಥಗಳ ಬಗ್ಗೆ ನಾವು ತಿಳಿದು ಕೊಳ್ಳಲು ಪ್ರಯತ್ನಿಸಬೇಕು.

ನಿಮ್ಮ ಆಹಾರ ಪದ್ಧತಿಯಲ್ಲಿ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ಅಂಜೂರ ಹಣ್ಣನ್ನು ಸೇರಿಸಿ ಅದರ ಲಾಭಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಪೌಷ್ಟಿಕ ಸತ್ವಗಳ ಪ್ರಮಾಣ ಜಾಸ್ತಿ ಇದೆ. ಜೊತೆಗೆ ನಾರಿನ ಅಂಶ ಕೂಡ ಹೆಚ್ಚಾಗಿರುವುದರಿಂದ ಚಳಿಗಾಲದಲ್ಲಿ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುವುದಿಲ್ಲ.

ಮೂಳೆಗಳ ಆರೋಗ್ಯಕ್ಕೆ

• ಅಷ್ಟೇ ಅಲ್ಲದೆ ಅಂಜೂರಗಳಲ್ಲಿ ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾದ ಕ್ಯಾಲ್ಸಿಯಂ, ಮೆಗ್ನೀಷಿ ಯಂ ಮತ್ತು ಫಾಸ್ಫರಸ್ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಚಳಿಗಾಲದಲ್ಲಿ ಮೂಳೆಗಳು ಮತ್ತು ಕೀಲುಗಳು ಹಿಡಿದುಕೊಂಡಂತೆ ಆಗುವ ತೊಂದರೆ ತಪ್ಪುತ್ತದೆ.

• ನಿಮ್ಮನ್ನು ನೀವು ಚಳಿಗಾಲದಲ್ಲಿ ಬೆಚ್ಚನೆ ಇರಿಸಿಕೊಳ್ಳಲು ಮತ್ತು ಶೀತ, ನೆಗಡಿ, ಕೆಮ್ಮು, ಜ್ವರಇತ್ಯಾದಿ ಸೋಂಕುಗಳಿಂದ ದೂರವಾಗಲು ಅಂಜೂರ ಹಣ್ಣಿನ ಸೇವನೆ ಮಾಡಬಹುದು.

ಹೃದಯದ ಆರೋಗ್ಯ

• ಪ್ರತಿದಿನ ಒಂದೆರಡು ಒಣಗಿದ ಅಂಜೂರ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

• ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ, ಈ ಹಣ್ಣಿನಲ್ಲಿ, ಹೃದಯದ ಆರೋಗ್ಯವನ್ನು ಕಾಪಾಡು ವಂತಹ, ಒಮೆಗಾ 3 ಮತ್ತು ಒಮೆಗಾ 6 ಅಂಶಗಳ ಜೊತೆಗೆ ಫಿನಾಲ್ ಸಂಯುಕ್ತಗಳು ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ

• ಇವು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತವೆ.

ಹಣ್ಣಿನಲ್ಲಿ ಸಿಗುವ ವಿಟಮಿನ್ಸ್’ಗಳು

ಅಂಜೂರ ಹಣ್ಣಿನಲ್ಲಿ ಇನ್ನೊಂದು ವಿಶೇಷತೆ ಎಂದರೆ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಎ ಪ್ರಮಾಣ ಹೆಚ್ಚಾಗಿದ್ದು, ನೈಸರ್ಗಿಕವಾಗಿ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡುವ ಜೊತೆಗೆ ತ್ವಚೆಯ ಸೌಂದರ್ಯಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ಪೌಷ್ಟಿಕ ಸತ್ವಗಳು ಸಿಗುವಂತೆ ಮಾಡುತ್ತದೆ.

ಉಸಿರಾಟದ ಸಮಸ್ಯೆ ಇದ್ದವರಿಗೆ

ಪ್ರಮುಖವಾಗಿ ಉಸಿರಾಟ ತೊಂದರೆಗೆ ಕಾರಣವಾಗುವ ಶೀತದ ಪ್ರಭಾವವನ್ನು ಇದು ಹೋಗಲಾಡಿಸುತ್ತದೆ. ಹಾಗಾಗಿ ಅಂಜೂರದ ಹಣ್ಣಿನಲ್ಲಿ ವಿಶೇಷವಾದ ಆರೋಗ್ಯದ ಪ್ರಯೋಜನಗಳನ್ನು ಎಲ್ಲರೂ ನಿರೀಕ್ಷೆ ಮಾಡಬಹುದು.

ಹಿಂದಿನ ಲೇಖನಬದುಕ ಬರಡು ಮಾಡಬ್ಯಾಡ್ರಿ: ಬೀಜ ಸಂರಕ್ಷಕಿ ಪಾಪಮ್ಮ
ಮುಂದಿನ ಲೇಖನಮಂಡ್ಯದಲ್ಲಿ ಮತಾಂತರಕ್ಕೆ ಯತ್ನ: ಐವರ ಬಂಧನ