ಮನೆ ಆರೋಗ್ಯ ಸಿಹಿ ಗೆಣಸಿನಲ್ಲಿ ಸಿಗುವ ಆರೋಗ್ಯಕಾರಿ ಪ್ರಯೋಜನಗಳು

ಸಿಹಿ ಗೆಣಸಿನಲ್ಲಿ ಸಿಗುವ ಆರೋಗ್ಯಕಾರಿ ಪ್ರಯೋಜನಗಳು

0

 

ಪೌಷ್ಟಿಕ ಸತ್ವಗಳನ್ನು ಹೆಚ್ಚಾಗಿ ಒಳಗೊಂಡಿರುವ ತರಕಾರಿಗಳಲ್ಲಿ ಸಿಹಿ ಗೆಣಸು ಕೂಡ ಒಂದು. ಇದನ್ನು ಸಿಹಿ ಆಲೂಗಡ್ಡೆ ಅಂತಲೂ ಕೂಡ ಕರೆಯುತ್ತಾರೆ. ಇದು ನಮಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೊಡುವುದರ ಜೊತೆಗೆ ಹಲವು ಬಗೆಯ ರೋಗಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

ಇದು ಮಧುಮೇಹ ವಿರೋಧಿ

ಕೆಲವೊಂದು ಅಧ್ಯಯನ ಹೇಳುವ ಹಾಗೆ ಸಿಹಿ ಗೆಣಸು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಉತ್ತಮವಾಗಿ ನಿರ್ವಹಣೆಯಾಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧತೆ ಕಡಿಮೆಯಾಗುತ್ತದೆ. ಹಾಗಾಗಿ ಸಿಹಿ ಗೆಣಸು ಸಕ್ಕರೆ ಕಾಯಿಲೆ ಇರುವವರಿಗೆ ಒಂದು ಅಗತ್ಯವಾಗಿ ಬೇಕಾದಂತಹ ಆಹಾರ ಪದಾರ್ಥವಾಗಿದೆ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಸಿಹಿ ಗೆಣಸು ತನ್ನಲ್ಲಿ choline ಎಂಬ ಅಂಶವನ್ನು ಹೊಂದಿದ್ದು ಇದು ನಮ್ಮ ದೇಹದ ಮಾಂಸ ಖಂಡಗಳ ಚಲನೆಯಲ್ಲಿ ಕೆಲಸ ಮಾಡುತ್ತದೆ ಮತ್ತು ನಮ್ಮ ಮೆದುಳಿನಲ್ಲಿ ಶೇಖರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಓದಿದ್ದನ್ನು ಅಥವಾ ತಿಳಿದುಕೊಂಡಿದ್ದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಇದು ನೆರವಾಗುತ್ತದೆ.

ಕಣ್ಣಿನ ದೃಷ್ಟಿಗೆ ಒಳ್ಳೆಯದು

• ಸಿಹಿ ಆಲೂಗಡ್ಡೆ ಅಥವಾ ಸಿಹಿಗೆಣಸು ತನ್ನಲ್ಲಿ ಬೀಟಾ ಕ್ಯಾರೋಟಿನ್ ಎಂಬ ಆಂಟಿ ಆಕ್ಸಿಡೆಂಟ್ ಅಂಶವನ್ನು ಒಳಗೊಂಡಿರುವ ಕಾರಣದಿಂದ ಇದರ ಬಣ್ಣ ಬೇರೆ ರೀತಿಯಲ್ಲಿ ಇರುತ್ತದೆ.

• ಬೀಟಾ ಕ್ಯಾರೋಟಿನ್ ಇದರಲ್ಲಿ ವಿಟಮಿನ್ ಎ ರೂಪ ಪಡೆದುಕೊಳ್ಳುತ್ತದೆ ಮತ್ತು ನಮ್ಮ ಕಣ್ಣುಗಳಲ್ಲಿ ಬೆಳಕನ್ನು ಕಂಡು ಹಿಡಿಯುವ ಸಂವೇದನೆಯನ್ನು ಕೊಡುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

• ಸಿಹಿಗೆಣಸು ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಕಾರಣದಿಂದ ಹಲವು ಬಗೆಯ ಕ್ಯಾನ್ಸರ್ ರೋಗಗಳ ವಿರುದ್ಧ ಇದು ರಕ್ಷಣೆ ಕೊಡುತ್ತದೆ.

• ದೇಹದ ಹಾನಿಕಾರಕ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇದು ಕೆಲಸ ಮಾಡಿ ಜೀವಕೋಶಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ ಜೊತೆಗೆ ಕ್ಯಾನ್ಸರ್ ಗಡ್ಡೆ ರೂಪಗೊಳ್ಳುವುದನ್ನು ತಡೆಯುತ್ತದೆ.