ಫರಿದಾಬಾದ್(Faridabad): ದೇಶದಲ್ಲಿ ಆರೋಗ್ಯ ಮತ್ತು ಆಧ್ಯಾತ್ಮ ಒಂದಕ್ಕೊಂದು ನಿಕಟ ಸಂಬಂಧ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹರಿಯಾಣದ ಫರಿದಾಬಾದ್ನಲ್ಲಿ 2,600 ಹಾಸಿಗೆಗಳ ಅಮೃತ ಆಸ್ಪತ್ರೆ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-19 ಲಸಿಕೆ ಅಭಿಯಾನದ ಯಶಸ್ವಿಗೆ ಆಧ್ಯಾತ್ಮಿಕ ಹಾಗೂ ಖಾಸಗಿ ಪಾಲುದಾರಿಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ, ಕೇಂದ್ರಿಕೃತ ಸಂಪೂರ್ಣ ಸ್ವಯಂಚಾಲಿತ ಲ್ಯಾಬೋರೇಟರಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ, ಸೌಲಭ್ಯವನ್ನು ಹೊಂದಿರುವ ಅಮೃತ ಆಸ್ಪತ್ರೆಯು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಗೆ ಉತ್ತೇಜನ ನೀಡಲಿದೆ ಎಂದರು.
ಕೋವಿಡ್ ಲಸಿಕೆ ಅಭಿಯಾನದ ಸಮಯದಲ್ಲಿ ಕೆಲವರು ಕೆಟ್ಟ ಪ್ರಚಾರಕ್ಕೆ ಯತ್ನಿಸಿದರು. ಆದರೆ ಆಧ್ಯಾತ್ಮಿಕ ನಾಯಕರು ಅದನ್ನು ಎದುರಿಸಿದಾಗ ನಮ್ಮ ಜನರು ಮುಂದೆ ಬಂದರು. ಇದು ಲಸಿಕೆ ಅಭಿಯಾನದಲ್ಲೂ ಪ್ರಭಾವ ಬೀರಿದೆ ಎಂದು ಹೇಳಿದರು.